ಮಣಿಪಾಲ ವಿದ್ಯಾರ್ಥಿಗಳ ಸೋಲಾರ್ ಕಾರು ಸೆ.14ರಂದು ಅನಾವರಣ

ಉಡುಪಿ, ಸೆಪ್ಟೆಂಬರ್ 13: ಮಾನವನ ಆವಿಷ್ಕಾರಗಳಿಗೆ ಅಂತ್ಯವೇ ಇಲ್ಲ. ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡು ಹಿಡಿದಿದ್ದರಿಂದ ಹಿಡಿದು ಇಲ್ಲಿಯ ತನಕ ಅದೆಷ್ಟು ಆವಿಷ್ಕಾರಗಳು ನಡೆದಿವೆ ಅನ್ನೋದಿಕ್ಕೆ ಲೆಕ್ಕವೇ ಇಲ್ಲ.

ಅಂತೆಯೇ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಮೊಟ್ಟ ಮೊದಲ ಬಾರಿಗೆ ಸೌರಶಕ್ತಿಯಿಂದ ಚಲಿಸುವ ಕಾರೊಂದನ್ನು ನಿರ್ಮಿಸಿದ್ದಾರೆ.

ಮಣಿಪಾಲದ ಎಂಐಟಿಯ ‘ಸೋಲಾರ ಮೊಬಿಲ್’ ತಂಡ ಈ ‘ಎಸ್‌ಎಂ-ಎಸ್1′ ಸೋಲಾರ್ ಕಾರನ್ನು ಸ್ಥಳೀಯವಾಗಿ ತಯಾರಿಸಿದೆ.

ಕಾರಿಗೆ ಬೇಕಾದ ಸೋಲಾರ್ ಪ್ಯಾನೆಲ್‌ನ್ನು ಟಾಟಾ ಸೋಲಾರ್ ನೀಡಿದ್ದು, ಎಲ್ಲಾ ಖರ್ಚುಗಳು ಸೇರಿ ಈ ಕಾರಿನ ತಯಾರಿಗೆ ಒಟ್ಟು ಸುಮಾರು 30 ರಿಂದ 35 ಲಕ್ಷ ರೂ.ವೆಚ್ಚ ಬಂದಿದೆ. ಇದರಲ್ಲಿ ಮಣಿಪಾಲ ವಿವಿ 10 ಲಕ್ಷ ರೂ. ನೀಡಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಎಸ್‌ಎಂ-ಎಸ್1’ ಹೆಸರಿನ ಈ ಕಾರನ್ನು ಸೆ.14ರಂದು ಅನಾವರಣಗೊಳಿಸಲಾಗುವುದು. ಎಂಐಟಿಯ ವಜ್ರ ಮಹೋತ್ಸವ ಹಾಗೂ ಸೆ.15ರಂದು ನಡೆಯುವ ಇಂಜಿನಿಯರ್ಸ್ ಡೇಗೆ ಪೂರ್ವಭಾವಿಯಾಗಿ ಈ ಕಾರನ್ನು ಸೆ.14ರಂದು ಅನಾವರಣಗೊಳಿಸಲಾಗುತ್ತದೆ.

ಮಣಿಪಾಲ ವಿವಿಯ ಚಾನ್ಸಲರ್ ಪ್ರೊ. ಎಚ್.ಎಸ್.ಬಲ್ಲಾಳ್ ಅವರು ಕಾರನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ.ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪ್ರೊ.ಜಿ.ಕೆ.ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.

 

Be the first to comment

Leave a Reply

Your email address will not be published.


*