ಬ್ಯಾಂಕ್ ಹೂಡಿಕೆದಾರರ ಮೇಲೆ ತೆರಿಗೆ ಇಲಾಖೆಯ ಹದ್ದಿನ ಕಣ್ಣು

ವ್ಯಕ್ತಿಗಳು ಬ್ಯಾಂಕ್ ಸ್ಥಿರ ಠೇವಣಿ (FD) ಮೂಲಕ ಹೆಚ್ಚಿನ ಬಡ್ಡಿ ಆದಾಯ ಪಡೆಯುತ್ತಿದ್ದಾರೆ. ಆದರೆ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡದೆ ಇರುವುದರಿಂದ ಇಂತಹ ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಬ್ಯಾಂಕ್ ಸ್ಥಿರ ಠೇವಣಿಗಳು (ಎಫ್ಡಿ) ಜನಪ್ರಿಯ ಬಂಡವಾಳ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಸ್ಥಿರ ಠೇವಣಿಗಳಿಂದ ಪಡೆದ ಬಡ್ಡಿಯ ಮೇಲೆ ತೆರಿಗೆಯ ಪರಿಣಾಮಗಳೇನು? ಟಿಡಿಎಸ್ ಸಂಬಂಧಿಸಿದ ನಿಬಂಧನೆಗಳು ಯಾವುವು? ಬ್ಯಾಂಕಿನಲ್ಲಿ ಇರಿಸಿದ ಬ್ಯಾಂಕ್ ಸ್ಥಿರ ಠೇವಣಿಗಳಿಂದ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಗಾಗುವುದೇ ಎಂಬುದು ಗಮನ ಹರಿಸಬೇಕಾದ ವಿಷಯ.
ಸ್ಥಿರ ಠೇವಣಿಗಳಿಂದ ಬರುವ ಬಡ್ಡಿ ಉಳಿತಾಯ ಖಾತೆಯಂತೆ ತೆರಿಗೆ ವಿನಾಯತಿ ಪಡೆದಿರುವುದಿಲ್ಲ. ಉಳಿತಾಯ ಖಾತೆಯಲ್ಲಿ ವರ್ಷಕ್ಕೆ ಹತ್ತು ಸಾವಿರ ರೂಪಾಯಿ ವರೆಗೆ ತೆರಿಗೆ ವಿನಾಯತಿ ಲಭಿಸುವುದು. ಸ್ಥಿರ ಠೇವಣಿಯಲ್ಲಿನ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಬ್ಯಾಂಕಿನ ವಿವಿಧ ಶಾಖೆಗಳ ಸ್ಥಿರ ಠೇವಣಿಗಳಿಂದ ಪಡೆದ ಬಡ್ಡಿಯ ಆದಾಯವು ಒಂದು ವರ್ಷಕ್ಕೆ ರು 10,000/- ಕ್ಕಿಂತ ಮೇಲ್ಪಟ್ಟಲ್ಲಿ ಶೇ. 10% ದರದಲ್ಲಿ ಬ್ಯಾಂಕುಗಳು ಮೂಲ ಆದಾಯದಲ್ಲಿ ತೆರಿಗೆಯನ್ನು (ಟಿಡಿಎಸ್) ಕಡಿತಗೊಳಿಸುತ್ತವೆ.
ರಿಕರಿಂಗ್ ಡಿಪಾಸಿಟ್ ಕೂಡ ಟಿಡಿಎಸ್ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ ಸ್ಥಿರ ಠೇವಣಿಯಿಂದ ಬರುವ ಬಡ್ಡಿ ಹಣ ಹಣಕಾಸು ವರ್ಷದಲ್ಲಿ ತೆರಿಗೆ ಮಿತಿಯಿಂದ ಹೆಚ್ಚಿದ್ದಲ್ಲಿ ಫಾರ್ಮ್ 15ಜಿ ಸಲ್ಲಿಸಿದರೂ ಅದು ಅಮಾನ್ಯವಾಗಿರುತ್ತದೆ. ಆದರೆ ಹೆಚ್ಚಿನ ಬ್ಯಾಂಕುಗಳು ಆನ್ಲೈನ್ ಮೂಲಕ 15G ಅಥವಾ 15H ಫಾರ್ಮ್ ಗಳನ್ನು ಸಲ್ಲಿಸಲು ಅವಕಾಶ ನೀಡುತ್ತವೆ.

Be the first to comment

Leave a Reply

Your email address will not be published.


*