ಸರಣಿ ಬೈಕ್ ಕಳ್ಳತನ; ಮೂವರನ್ನು ಬಂಧಿಸಿದ ಮಣಿಪಾಲ ಠಾಣಾ ಪೊಲೀಸರು – ಎನ್.ಎಂ.ಸಿ ನ್ಯೂಸ್

ಸರಣಿ ಬೈಕ್ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲೆ ನೂತನ ಎಸ್ಪಿಯಾಗಿ ಆಗಮಿಸಿದ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಬೈಕ್ ಗಳನ್ನ ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತರನ್ನು ಉಡುಪಿ ನಿವಾಸಿಗಳಾದ ಶರತ್ ಕುಮಾರ್ ಯಾನೆ ಭಟ್ಟ, ಜಡಿಯ ರಾಜೇಂದ್ರ ಹಾಗೂ ಪ್ರತಾಪ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಮೂರು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಒಂದು ಬೈಕ್ ಸುರತ್ಕಲ್ ಠಾಣಾ ವ್ಯಾಪ್ತಿಗೆ ಸೇರಿರುವುದಾಗಿ ತಿಳಿದುಬಂದಿದೆ. ಕಾರ್ಯಾಚರಣೆಗೆ ಡಿವೈಎಸ್ಪಿ ಜೈ ಶಂಕರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅದರಂತೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್, ಪಿಎಸ್ ನಂಬಿಯಾರ್, ಎಎಸ್ ಶೈಲೇಶ್ , ಅಬ್ದುಲ್ ರಝಾಕ್, ಉಮೇಶ್ , ದಯಾಕರ್ ಪ್ರಸಾದ್, ಥಾಮ್ಸನ್ , ವಿಶ್ವಜಿತ್, ಪ್ರಸನ್ನ, ಆದರ್ಶ್, ಸಂತೋಷ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಂಡದ ಕಾರ್ಯಾಚರಣೆಯನ್ನು ನೂತನ ಎಸ್ಪಿ ವಿಷ್ಣುವರ್ಧನ್ ಅವರು ಪ್ರಶಂಸಿದ್ದಾರೆ.

 

Be the first to comment

Leave a Reply

Your email address will not be published.


*