ಖಾದರ್ ನಡೆ ಅಭಿವೃದ್ಧಿ ಕಡೆ; ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಪಕ್ಷಿನೋಟ – ಎನ್.ಎಂ.ಸಿ ನ್ಯೂಸ್

ಸದಾ ಚಟುವಟಿಕೆಯಿಂದ ಕೂಡಿರುವ ಶಾಸಕ ಯು ಟಿ ಖಾದರ್ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಾರೆ. ಸ್ವರ್ಣ ಸ್ವಸಹಾಯ ಗುಂಪುಗಳ ನಗರ ಮಟ್ಟದ ಒಕ್ಕೂಟ, ಉಳ್ಳಾಲ, ಬ್ಯಾಂಕ್ ಆಫ್ ಬರೋಡ ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಸ್ವಸಹಾಯ ಗುಂಪುಗಳ ಮಹಿಳಾ ಸಮಾವೇಶದಲ್ಲಿ ಯು ಟಿ ಖಾದರ್ ಭಾಗಿಯಾದರು.

ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಕೊಣಾಜೆ ನಡುಪದವು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜೇಶ್ ಹಾಗೂ ಶಿಕ್ಷಕಿ ಗೀತಾರವರ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಸಕರು ಭಾಗಿಯಾದರು.

ಶ್ರೀ ರವಿಶಂಕರ್ ವಿದ್ಯಾ ಮಂದಿರ ಮುಡಿಪು ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಯು ಟಿ ಖಾದರ್ ಯಶಸ್ವಿಯಾಗಿ ಪಾಲ್ಗೊಂಡರು.

ಸೈಂಟ್ ಜಾರ್ಜ್ ಎಜ್ಯುಕೇಷನಲ್ ಇನ್ಸಿಟಿಟ್ಯೂಷನ್ ನೆಲ್ಯಾಡಿ ಇದರ 42ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರ ನಿಯೋಗವು ಖಾದರ್ ಅವರ ಸ್ವ ನಿವಾಸಕ್ಕೆ ಆಗಮಿಸಿ ಅಬ್ಬಕ್ಕ ಉತ್ಸವ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದರು.

Be the first to comment

Leave a Reply

Your email address will not be published.


*