ಕೇಂದ್ರ ಸರ್ಕಾರದ ವಿರುದ್ಧದ ಜನಾಂದೋಲನದಲ್ಲಿ ಅಂಬೇಡ್ಕರ್ ಸಂವಿಧಾನ, ಮಹಾತ್ಮ ಗಾಂಧಿ ಭಾರತಕ್ಕೆ ಜಯ ಸಿಗುತ್ತದೆ. ಕೇಂದ್ರದ ಬಿಜೆಪಿಯ ಕಾನೂನಿಗೆ ಸೋಲಾಗುತ್ತದೆ; ಯು ಟಿ ಖಾದರ್ – ಎನ್.ಎಂ.ಸಿ ನ್ಯೂಸ್

ಉಳ್ಳಾಲ: ಮೋದಿ ಸರಕಾರ ಎಲ್ಲರಲ್ಲಿ ದೇಶದ ಬಗ್ಗೆ ಪ್ರಶ್ನಿಸಿ ಈಗ ಭಾರತೀಯರಲ್ಲೇ ನಿಮ್ಮ ದೇಶ ಯಾವುದು ಎಂದು ಪ್ರಶ್ನಿಸಲು ಹೊರಟಿದೆ. ಎನ್ ಆರ್ ಸಿ ತಿದ್ದುಪಡಿ ಕಾಯ್ದೆ ಘೋಷಿಸಿ ಭಾರತೀಯರನ್ನು ವಿಂಗಡಣೆ ಮಾಡಲು ಹೊರಟಿದೆ. ಇದಕ್ಕೆ ಸಾವಿರ ವರ್ಷವಾದರೂ ಅವಕಾಶ ನೀಡುವುದಿಲ್ಲ ಎಂದು ದ.ಕ.ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಉಳ್ಳಾಲ ಮುಸ್ಲಿಂ ಒಕ್ಕೂಟ ಇದರ ಆಶ್ರಯ ದಲ್ಲಿ ಉಳ್ಳಾಲ ಹಝ್ರತ್ ಶಾಲೆ ಬಳಿಯ ಮೈದಾನದಲ್ಲಿ ರವಿವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. ಎನ್ ಆರ್ ಸಿ, ಸಿಎಎ ಮೂಲಕ ಜನರ ಮೇಲೆ ಸವಾರಿ ಮಾಡಲು ಸರ್ಕಾರದ ಚಿಂತನೆ ಇರಬಹುದು. ಆದರೆ ಜನರನ್ನು ವಿಂಗಡಿಸಿ ಸಂಘರ್ಷ ಸೃಷ್ಟಿ ಮಾಡಲು ಸಾಧ್ಯವಿಲ್ಲ. ನಾವು ಎನ್ ಆರ್ ಸಿಗೆ ಬದ್ಧರಾಗಲು ತಯಾರಿಲ್ಲ. ಇದರಲ್ಲಿ ಅವರಿಗೆ ಯಶಸ್ವಿ ಆಗಲು ಸಾಧ್ಯವಿಲ್ಲ. ನಾನಂತೂ ಇದಕ್ಕೆ ತಯಾರಿಲ್ಲ. ಜೈಲಿಗೆ ನನ್ನನ್ನು ಕಳುಹಿಸುವುದಾದರೆ ಮೊದಲು ಮಾಹಿತಿ ನೀಡಿ ಕಳುಹಿಸಲಿ. ಇದನ್ನು ಎದುರಿಸಲು ಸಿದ್ಧ ಎಂದು ಅವರು ಹೇಳಿದರು.

ಈ ವೇಳೆ ದಿನೇಶ್ ಹೆಗ್ಡೆ, ಶಾಸಕ ಯು ಟಿ ಖಾದರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸೆಸೆಫ್ ರಾಜ್ಯಾಧ್ಯಕ್ಷ ಯಾಕೂಬ್ ಸಅದಿ, ಎಸ್ಕೆಎಸ್ಸೆಸೆಫ್ ನ ಅನೀಶ್ ಕೌಸರಿ, ದಲಿತ ಮುಖಂಡ ಅಶೋಕ್ ಕೊಂಚಾಡಿ, ಮಹಮ್ಮದ್ ಕುಂಞ, ಫಾದರ್ ಫ್ರಾನ್ಸಿಸ್ ಅಸಿಸ್ ಮರಿಯ, ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ, ರಫೀವುದ್ದೀನ್ ಕುದ್ರೋಳಿ, ಅಶ್ರಫ್ ಮಾಚಾರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ, ಕಣಚೂರು ಮೋನು, ಅತ್ತಾವುಲ್ಲ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*