ಜನತೆಗೆ ಗುಡ್ ನ್ಯೂಸ್; ಈರುಳ್ಳಿ ಬೆಲೆ ಇಳಿಕೆ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಗ್ರಾಹಕರಲ್ಲಿ ಕಣ್ಣೀರು ತರಿಸಿದ ಈರುಳ್ಳಿ ಬೆಲೆ ಇಳಿಕೆಯಾಗತೊಡಗಿದೆ. ಶತಕ ಬಾರಿಸಿ 200 ರೂಪಾಯಿ ಸನಿಹಕ್ಕೆ ತಲುಪಿದ್ದ ಈರುಳ್ಳಿ ದರ ಕಳೆದ ನಾಲ್ಕು ದಿನಗಳಿಂದ ಕಡಿಮೆಯಾಗ್ತಿದೆ.
ಮಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 45 ರಿಂದ 50 ರೂಪಾಯಿಗೆ ಇಳಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ 60 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಒಂದು ಕೆಜಿ ಈರುಳ್ಳಿ ದರ 50ರಿಂದ 60 ರೂಪಾಯಿಯಿಂದ 80 ರೂಪಾಯಿವರೆಗೂ ಇದೆ. ಕಳೆದ 4ದಿನಗಳಿಂದ ಈರುಳ್ಳಿ ಬೆಲೆ ಕಡಿಮೆಯಾಗತೊಡಗಿದ್ದು, ಕೆಲವು ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

ಹೊಸ ಫಸಲು ಮಾರುಕಟ್ಟೆಗೆ ಬರಲು ಆರಂಭಿಸಿದ ಬಳಿಕ ಈರುಳ್ಳಿ ಕೆಜಿಗೆ 20 ರೂ.ಗೆ ತಲುಪಲಿದೆ ಎಂಬ ಚರ್ಚೆಗಳು ನಡೆದಿದೆ. ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಈ ಸಲ ಭಾರೀ ಮಳೆ ಮತ್ತು ನೆರೆ ಹಾನಿ ಉಂಟಾಗಿದ್ದರಿಂದ ಫಸಲು ಕಡಿಮೆಯಾಗಿದೆ. ಹಾಗಾಗಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಬೆಲೆ ಏರಿಕೆ ತಡೆಗಟ್ಟಲು ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. ರುಚಿಯಾಗಿಲ್ಲದ ಕಾರಣ ಟರ್ಕಿ ಮತ್ತು ಈಜಿಪ್ಟ್ ಈರುಳ್ಳಿಗೆ ಬೇಡಿಕೆ ಇಲ್ಲದಂತಾಗಿದೆ.

 

Be the first to comment

Leave a Reply

Your email address will not be published.


*