ರೈ ದಿನಚರಿ; ಎಲ್ಲೆಲ್ಲಿ ಏನೇನು..? – ಎನ್.ಎಂ.ಸಿ ನ್ಯೂಸ್

ಗ್ರಾಮದೈವ ಶ್ರೀ ಕೊಡಮಣಿತ್ತಾಯ ಕಲ್ಕುಡ, ಕಲ್ಲುರ್ಟಿ, ಅಡಿಮರಾಯ ದೈವಗಳು ಕುಂಟಾಲಪಲ್ಕೆ, ದೈವಶ್ಯ ಪಡೂರು ಮತ್ತು ದೈವಶ್ಯಮೂಡೂರು ಇದರ ವರ್ಷಾವಧಿ ಜಾತ್ರೆಗೆ ಮಾಜಿ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಬಿ ಸಿ ರೋಡ್ ಹೋಟೆಲ್ ರಂಗೋಲಿ ರಾಜಾಂಗಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆಯ ಬಂಟ್ವಾಳ ತಾಲೂಕಿನ ಪೂರ್ವಭಾರಿ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ರೈ ಭಾಗಿಯಾಗಿದ್ದರು.

ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು, ಪದ್ಮಶಾಲಿ ಸುವರ್ಣ ಮಹೋತ್ಸವ ಭವನ ಆದಿ ಉಡುಪಿ ಇದರ 28ನೇ ವರ್ಷದ ಪದ್ಮಶಾಲಿ ಕ್ರೀಡೋತ್ಸವ ಶ್ರೀ ಮಹಮ್ಮಾಯೀ ಕ್ರೀಡಾಂಗಣ ಸಂಗಬೆಟ್ಟು-ಸಿದ್ದಕಟ್ಟೆಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ ರವರು ಭೇಟಿ ನೀಡಿ ಶುಭಹಾರೈಹಿಸಿದರು.

ಶ್ರೀ ಅಯ್ಯಪ್ಪ ಭಜನಾ ಮಂದಿರ ನೆಕ್ಕರೆಗುಳಿ ಈ ಸನ್ನಿಧಾನದಲ್ಲಿ 22ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಪೂಜೋತ್ಸವಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಇವರು ಭೇಟಿ ನೀಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.

ಸೌಹಾರ್ದ ಫ್ರೆಂಡ್ಸ್ ಬೊಳ್ಳಾಯಿ ಸಜಿಪ ಮೂಡ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಬಂಟ್ವಾಳ ತಾಲೂಕು ಇದರ ಸಹಭಾಗಿತ್ವದಲ್ಲಿ 4ನೇ ವರ್ಷದ ಹೊನಲು ಬೆಳಕಿನ ಸೌಹಾರ್ದ ಟ್ರೋಫಿ 2020 ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಬಿ ರಮಾನಾಥ ರೈ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಕ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*