ಮಣಿನಾಲ್ಕೂರು ಸೇವಾ ಸಹಕಾರ ಸಂಘ ನಿಯಮಿತ ಸರಪಾಡಿ ಇದರ ನೂತನ ವಿಸ್ತ್ರತ ಕಟ್ಟಡ ಉದ್ಘಾಟನೆ – ಎನ್.ಎಂ.ಸಿ ನ್ಯೂಸ್

ಮಣಿನಾಲ್ಕೂರು ಸೇವಾ ಸಹಕಾರ ಸಂಘ ನಿಯಮಿತ ಸರಪಾಡಿ ಇದರ ನೂತನ ವಿಸ್ತ್ರತ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮೂಕ್ಯ ಅತಿಥಿಯಾಗಿ ಮಾಜಿ ಸಚಿವರಾದ ಬಿ ರಮಾನಾಥ ರೈ ಆಗಮಿಸಿ ಭದ್ರತಾ ಕೊಠಡಿಯನ್ನುಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಇವರು ಸಹಕಾರಿ ಕ್ಷೇತ್ರ ತನ್ನ ನಂಬಿಕೆಯನ್ನು ಹಾಗೇ ಉಳಿಸಿಕೊಂಡು ಬಂದಿದೆ. ಬ್ಯಾಂಕ್‍ಗಿಂತ ಸಹಕಾರಿ ಬ್ಯಾಂಕ್‍ಗಳ ಮೇಲೆ ಜನರಿಗೆ ಅತಿ ಹೆಚ್ಚು. ಅಧಿಕಾರವು ಅವಕಾಶ, ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕು.ಒಂದಿ ಸಹಕಾರಿ ಕ್ಷೇತ್ರ ಬಲಿಷ್ಠವಾಗಿದ್ದರೆ ಅದು ಊರಿನ ಶಕ್ತಿ. ಸಹಕಾರಿ ಸಂಸ್ಥೆಯನ್ನು ಬಲಿಷ್ಠಗೊಳಿಸಬೇಕೆಂಬ ಧ್ಯೇಯ ಪ್ರತಿಯೊಬ್ಬರಲ್ಲೂ ಇರಬೇಕು. ಸಹಕಾರಿ ಕ್ಷೇತ್ರಕ್ಕೆ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರ ಕೊಡುಗೆ ಅಪಾರ ಎಂದರು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ ಏನ್. ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು

 

Be the first to comment

Leave a Reply

Your email address will not be published.


*