ಬದಲಾಗಲಿದೆ ‘ರಾಮನಗರ’ದ ಹೆಸರು.! ಏನದು ಹೆಸರು..? – ಎನ್.ಎಂ.ಸಿ ನ್ಯೂಸ್

ದೇಶದ ಕೆಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಅಲ್ಲಿನ ಸರ್ಕಾರಗಳು ಕೆಲವೊಂದು ಊರುಗಳ ಹೆಸರುಗಳನ್ನು ಬದಲಾವಣೆ ಮಾಡಿವೆ. ಈಗ ಆ ಪಟ್ಟಿಗೆ ಕರ್ನಾಟಕವೂ ಸೇರಲಿದ್ದು, ಆದರೆ ಇದರ ಹಿಂದೆ ಹಲವು ಲೆಕ್ಕಾಚಾರಗಳು ಇವೆ. ಹೌದು, ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಮರುನಾಮಕರಣ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿದ್ದು, ಈ ಮೂಲಕ ಉದ್ಯಮಿಗಳನ್ನು ಸೆಳೆಯುವ ಉದ್ದೇಶ ಹೊಂದಲಾಗಿದೆ.

ಬೆಂಗಳೂರು ಮಗ್ಗುಲಲ್ಲೇ ಇರುವ ಜೊತೆಗೆ ಹಲವು ಮೂಲಭೂತ ಸೌಕರ್ಯ ಹೊಂದಿರುವ ರಾಮನಗರ ಜಿಲ್ಲೆ ಕುರಿತು ಉದ್ಯಮಿಗಳು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಬೆಂಗಳೂರಿಗೆ ಇರುವ ಬ್ರಾಂಡ್ ನೇಮ್ ಬಳಸಿಕೊಂಡು ರಾಮನಗರವನ್ನು ನವ ಬೆಂಗಳೂರು ಎಂದು ನಾಮಕರಣ ಮಾಡಿದರೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

 

Be the first to comment

Leave a Reply

Your email address will not be published.


*