ಯೇಸು ಮುಖಕ್ಕೆ ಡಿಕೆಶಿ ಚಿತ್ರ; ಇದು ಟ್ರೋಲ್ ವಿಕೃತಿ -ಎನ್.ಎಂ.ಸಿ ನ್ಯೂಸ್

ರಾಮನಗರ: ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಸಹಾಯ ಮಾಡಿದ ಶಾಸಕ ಡಿ.ಕೆ. ಶಿವಕುಮಾರ್ ವಿರುದ್ಧ ಅಂತರ್ಜಾಲದಲ್ಲಿ ಟ್ರೋಲ್ ಹೆಚ್ಚಾಗಿವೆ. ಅದರಲ್ಲೂ ಕೆಲವರು ಯೇಸು ಭಾವಚಿತ್ರಕ್ಕೆ ಡಿಕೆಶಿ ಮುಖ ಹಾಕಿ ವಿಕೃತಿ ತೋರಿದ್ದಾರೆ.

ಯೇಸು ಪ್ರತಿಮೆ ನಿರ್ಮಾಣ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈ ನಡುವೆ ಕೆಲವರು ವೈಯಕ್ತಿಕ ನಿಂದನೆಗಳಿಗೂ ಮುಂದಾಗಿದ್ದಾರೆ. ಬಿಜೆಪಿಯ ಕೆಲವು ಸಂಸದರು, ಶಾಸಕರಿಂದಲೇ ಧರ್ಮ ಪ್ರಚೋದನೆಯ ಟೀಕೆಗಳು ಬರುತ್ತಿವೆ. ಅವರ ಹಿಂಬಾಲಕರೂ ಡಿಕೆಶಿ ಅವರ ಕಾಲೆಳೆಯತೊಡಗಿದ್ದಾರೆ. ಶಿವಕುಮಾರ್‍ರನ್ನು ‘ಯೇಸುಕುಮಾರ್’ ಎಂದೆಲ್ಲ ಬರೆಯಲಾಗಿದೆ. ಇದಕ್ಕೆ ಡಿ.ಕೆ. ಶಿವಕುಮಾರ್ ಅಷ್ಟೇ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದು ‘ಪ್ರತಿಮೆ ನಿರ್ಮಾಣ ಭಗವಂತನಿಗೆ ಬಿಟ್ಟ ವಿಚಾರ’ ಎಂದಿದ್ದಾರೆ.

Be the first to comment

Leave a Reply

Your email address will not be published.


*