ಕರಾವಳಿಯಲ್ಲಿ ಅದ್ಧೂರಿಯಾಗಿ ತೆರೆಕಂಡ ಕುದ್ಕನ ಮದ್ಮೆ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಜಿ.ಆರ್.ಕೆ ಲಾಂಛನದಲ್ಲಿ ತಯಾರಾದ ಎ. ಜಯರಾಜ್ ನಿರ್ದೇಶನದ ಗೌರಿ ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ ‘ಕುದ್ಕನ ಮದ್ಮೆ’ ತುಳು ಸಿನಿಮಾ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ಚಲನಚಿತ್ರ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಸಿನಿಮಾವನ್ನು ಬಿಡುಗಡೆಗೊಳಿಸಿ ಪ್ರಸಕ್ತ ವರ್ಷ ತೆರೆಕಾಣುವ ಮೊದಲ ತುಳು ಸಿನಿಮಾ ‘ಕುದ್ಕನ ಮದ್ಮೆ’ ಯಶಸ್ಸನ್ನು ದಾಖಲಿಸಲಿ ಎಂದು ಶುಭ ಹಾರೈಸಿದರು.

ಕದ್ರಿ ನವನೀತ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಚಲನಚಿತ್ರ ನಿರ್ಮಾಪಕರಾದ ಆರ್. ಧನರಾಜ್, ಶರತ್ ಕದ್ರಿ, ಗೌರಿ ಆರ್ ಹೊಳ್ಳ, ಮಹಾಬಲೇಶ್ವರ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಭೋಜರಾಜ ವಾಮಂಜೂರು, ಮಹೇಶ್ ಮೂರ್ತಿ ಸುರತ್ಕಲ್, ನಿರ್ದೇಶಕ ಎ. ಜಯರಾಜ್, ಸುಹಾಸ್ ಹೊಳ್ಳ, ಶಶಿರಾಜ್ ಕಾವೂರು, ಆನಂದ ಶೆಟ್ಟಿ ಅಡ್ಯಾರ್, ಶೀತಲ್ ನಾಯಕ್, ಜೀವನ್ ಉಳ್ಳಾಲ್, ರಮೇಶ್ ರೈ ಕುಕ್ಕುವಳ್ಳಿ, ಕುಮಾರ್ ಬಂಗೇರ, ಗೌತಮ್ ಶೆಟ್ಟಿ, ಶ್ರೀಶ ಭಂಡಾರಿ, ಚಂದ್ರಾವತಿ ವಸಂತ್, ಸುಧನ್ ಶ್ರೀಧರ್, ಪೃಥ್ವಿ ಅಂಬರ್, ಉದಯ ಆಳ್ವ ಸುರತ್ಕಲ್, ಯಶವಂತ ಶೆಟ್ಟಿ ಕೃಷ್ಣಾಪುರ, ಅರುಣ್ ಶೆಟ್ಟಿ ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

‘ಕುದ್ಕನ ಮದ್ಮೆ’ ಸಿನಿಮಾವು ನಗರದ ಜ್ಯೋತಿ, ಬಿಗ್ ಸಿನಿಮಾಸ್, ಪಿ..ಆರ್, ಸಿನಿ ಪೆÇಲೀಸ್, ಉಡುಪಿಯ ಅಲಂಕಾರ್, ಮಣಿಪಾಲದ ಐನಾಕ್ಸ್, ಪುತ್ತೂರಿನ ಅರುಣಾ, ಕಾಸರಗೋಡಿನ ಕೃಷ್ಣಾದಲ್ಲಿ ಪ್ರದರ್ಶನ ಕಾಣಲಿದೆ.

ಕುದ್ಕನ ಮದ್ಮೆ; ಕಲಾವಿದರ ಸಂಗಮ

ಕುದ್ಕನ ಮದೆಮದ್ಮೆ ಸಿನೆಮಾದಲ್ಲಿ ಪೃಥ್ವಿ ಅಂಬರ್, ಶೀತಲ್ ನಾಯಕ್, ದೇವಿಪ್ರಕಾಶ್ ಉರ್ವ, ಕಾರ್ತಿಕ್ ರಾವ್ ಮತ್ತು ಮುಂಬಯಿ ರಂಗ ಕಲಾವಿದೆ ಚಂದ್ರಾವತಿ ವಸಂತ್ ಮುಖ್ಯ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ಪಿಂಕಿರಾಣಿ, ಜೀವನ್ ಉಳ್ಳಾಲ ತಾರಾಗಣದಲ್ಲಿದ್ದಾರೆ.

Be the first to comment

Leave a Reply

Your email address will not be published.


*