ಹತ್ತು ಕೇಸದರೂ ಪರವಾಗಿಲ್ಲ ನಾವು ಹೋರಾಟ ಮಾಡುತ್ತೇವೆ – ಯು ಟಿ ಖಾದರ್- ಎನ್.ಎಂ.ಸಿ ನ್ಯೂಸ್

ಎನ್.ಸಿ.ಸಿ, ಎನ್ ಆರ್ ಇ, ಸಿಎಬಿ ವಿರುದ್ಧ ಪ್ರತಿಭಟನೆ ನಡೆಸುವಾ ಹತ್ತು ಕೇಸದರೂ ಪರವಾಗಿಲ್ಲ, ನಾವು ಹೋರಾಟ ಮಾಡುತ್ತೇವೆಂದು ಶಾಸಕ ಯು ಟಿ ಖಾದರ್ ಹೇಳಿದ್ದಾರೆ. ಕೆಸಿ ರೋಟ್‍ನಲ್ಲಿ ಸಂಯುಕ್ತ ನಾಗರಿಕಾ ವೇದಿಕೆ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಈ ಮಾತನ್ನು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇದು ಹೋರಾಟದ ಪ್ರಾರಂಭ. ಕೇಂದ್ರ ಈ ಪ್ರತಿಭಟನೆ ತಾತ್ಕಾಲಿಕ ಎಂದು ಚಿಂತನೆ ಮಾಡಿದರೆ ಅದು ಸುಳ್ಳು. ಎಲ್ಲಿಯವರೆಗೆ ಈ ಕಾಯ್ದೆ
ಹಿಂಪಡೆಯುವುದಿಲ್ಲವೋ ಅಲ್ಲಿಯವೆರೆಗೆ ಈ ಹೋರಾಟ ಮುಂದುವರಿಯುತ್ತದೆ. ದೇಶದಾದ್ಯಂತ, ಈ ಪ್ರತಿಭಟನೆಯಲ್ಲಿ ಹಿಂದು ಮುಸ್ಲಿಂ, ಕ್ರೈಸ್ತ ಭಾಂಧವರು ಕೈ ಜೋಡಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಂದಿಯ ಸರ್ಟಿಫಿಕೇಟ್ ಇಲ್ಲದಾಗಿದೆ. ಅವರ ಹಾಗೂ ಅವರ ಹಿಂದಿನ ತಲೆಮಾರಿನ ಸರ್ಟಿಫಿಕೇಟ್ ಇಲ್ಲ. ತಾತ ಮುತ್ತಾತನವರ ಸರ್ಟಿಫಿಕೇಟ್ ಕೇಳಿದರೆ ಅವರ ಗೋರಿ ಮಾತ್ರ ತೋರಿಸಬಹುದು.

ಮಾನ್ಯ ಗೃಹ ಮಂತ್ರಿಗಳು ಯಾವ ಉದ್ದೇಶವನ್ನು ಇಟ್ಟುಕೊಂಡು ಈ ಕಾಯ್ದೆಯನ್ನು ತರಲು ಹೊರಟಿದ್ದಾರೆ ಎಂಬುವುದನ್ನು ಸ್ಪಷ್ಟವಾಗಬೇಕಾಗಿದೆ. ಪ್ರಧಾನ ಮಂತ್ರಿಯ ಬಳಿ ಶಾಲೆಯ ಸರ್ಟಿಫಿಕೇಟ್ ಇಲ್ಲವಂತೆ ಇನ್ನು ಗ್ರಾಮೀಣ ಪ್ರದೇಶದವರ ಬಳಿ ಇರುತ್ತದೆ. ಜನರ ಭಯವನ್ನು ಹೋಗಲಾಡಿಸುವ ಕಾರ್ಯ ಆಗಬೇಕಾಗಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕಾದ ಅನಿವಾರ್ಯತೆ ಇದೆ. ಧರ್ಮ ಮುಖ್ಯವಲ್ಲ, ಪ್ರದೇಶ ಮುಖ್ಯವಲ್ಲ ಎಂದರು. ಯಾವ ಆಲೋಚನೆಯಿಂದ ಆಡಳಿತ ನಡೆಸುತ್ತಾರೆ ಎಂಬುವುದನ್ನು ತಿಳಿಯಬೇಕಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸಿದವರಿಗೆ ಧನ್ಯವಾದ ಸಮರ್ಪಿಸಿದರು.

Be the first to comment

Leave a Reply

Your email address will not be published.


*