ಮತ್ತೆ ತೆರೆಮೇಲೆ ಬರಲಿದೆ ಮಠ..! ಅರೆ ಏನಿದು ಕಥೆ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ – ಎನ್.ಎಂ.ಸಿ ನ್ಯೂಸ್

‘ಮಠ’ ಸಿನಿಮಾವನ್ನು ಎಷ್ಟು ಬಾರಿ ನೋಡಿದರೂ ಬೇಸರ ಆಗುವುದಿಲ್ಲ ಎನ್ನುವ ಮಾತನ್ನು ಅನೇಕರು ಹೇಳುತ್ತಾರೆ. ಆದರೆ, ಇದೀಗ ‘ಮಠ’ ಸಿನಿಮಾ ಮತ್ತೆ ಸಿದ್ಧವಾಗುತ್ತಿದೆ. ಅರ್ಥಾತ್ ‘ಮಠ’ ಹೆಸರಿನ ಮತ್ತೊಂದು ಹೊಸ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಮಠ’ ಎಂದ ಕೂಡಲೇ ನಟ ಜಗ್ಗೇಶ್ ಹಾಗೂ ನಿರ್ದೇಶಕ ಗುರು ಪ್ರಸಾದ್ ನೆನಪಿಗೆ ಬರುತ್ತಾರೆ. ಆದರೆ, ಈ ಮಠಕ್ಕೂ ಅವರಿಗೂ ಸಂಬಂಧ ಇಲ್ಲ. ರವೀಂದ್ರ ವೆಂಕಿ ಎನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಸಂತೋಷ್ ದಾವಣಗೆರೆ ಈ ಸಿನಿಮಾದ ನಾಯಕನಾಗಿದ್ದಾರೆ. ಹೊಸ ವರ್ಷ ವಿಶೇಷವಾಗಿ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಹೊಸ ತಂಡದ ಜೊತೆಗೆ ಹಿರಿಯ ಕಲಾವಿದರು ಕೈ ಜೋಡಿಸಿದ್ದಾರೆ. ಸಿನಿಮಾದಲ್ಲಿ ಸಾಧುಕೋಕಿಲ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ ಹಾಗೂ ಗಿರಿ ಕಾಣಿಸಿಕೊಂಡಿದ್ದಾರೆ.

ಸತ್ಯ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಶ್ರೀಗುರು ಸಂಗೀತ, ಜೀವನ ಗೌಡ ಕ್ಯಾಮರಾ, ಸಿ ರವಿಚಂದ್ರನ್ ಸಂಕಲನ ಮಾಡಲಿದ್ದಾರೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಫೀರ್, ಪೆನ್ನಯ್ಯ ಹಾಡುಗಳನ್ನು ಬರೆಯಲಿದ್ದಾರೆ. ವಿ ಆರ್ ಕಂಬೈನ್ಸ್ ಬ್ಯಾನರ್ ನಲ್ಲಿ ‘ಮಠ’ ಸಿನಿಮಾ ನಿರ್ಮಾಣವಾಗುತ್ತಿದೆ.

 

Be the first to comment

Leave a Reply

Your email address will not be published.


*