ಸೂಪರ್ ಸ್ಟಾರ್ ರಜನಿಕಾಂತ್ ಗೆ ಈ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ: ಯಾವುದು ಅಂತ ಗೊತ್ತಾದ್ರೆ ಅಚ್ಚರಿಯಾಗುತ್ತೆ!

ಕೆಲ ಕಲಾವಿದರು ಯಾವುದೇ ಪಾತ್ರ ಸಿಕ್ಕರೂ ನಟಿಸುತ್ತಾರೆ. ಅಂತಹದ್ದೇ ಇಂತಹದ್ದೇ ಪಾತ್ರ ಇರಬೇಕೆಂದಿಲ್ಲ. ಆದರೆ ಕೆಲ ನಟ ನಟಿಯರು ಮಾತ್ರ ಸಣ್ಣ ಪಾತ್ರದಿಂದ ಹಿಡಿದು ದೊಡ್ಡ ದೊಡ್ಡ ಪಾತ್ರಗಳು ಇಷ್ಟವಾದಲ್ಲಿ ಮಾತ್ರ ಜೀವ ತುಂಬುತ್ತಾರೆ. ಅದರಲ್ಲೂ ಸ್ಟಾರ್ ನಟರು ತಮಗೆ ಯಾವ ಪಾತ್ರ ಒಪ್ಪುತ್ತೆ, ಸ್ಕ್ರಿಪ್ಟ್ ಚೆನ್ನಾಗಿದ್ಯಾ ಎಂದು ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ.  ಇದೀಗ ಸೂಪರ್‍ಸ್ಟಾರ್ ರಜನಿ ಅವರಿಗೂ ನಿರ್ದಿಷ್ಟ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ ಇದೆಯಂತೆ. ಬಹುತೇಕ ಎಲ್ಲಾ ರೀತಿಯ ಪಾತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಆದರೆ ತೃತೀಯಲಿಂಗಿ ಪಾತ್ರದಲ್ಲಿ ನಟಿಸಿಲ್ಲ. ಈ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ ಇದೆ ಎಂದು ರಜನಿಕಾಂತ್ ಹೇಳಿದ್ದಾರೆ.

45 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು 160 ಸಿನಿಮಾಗಳಲ್ಲಿ ನಟಿಸಿದ್ದೇನೆ, ಆದರೆ ಮಂಗಳಮುಖಿ ಪಾತ್ರದಲ್ಲಿ ನಟಿಸಿಲ್ಲ. ಇದನ್ನೂ ಪ್ರಯೋಗ ಮಾಡಬೇಕೆಂಬ ಆಸೆ ಇದೆ ಎಂದಿದ್ದಾರೆ. ತಮ್ಮ ಮುಂದಿನ ಚಿತ್ರ ದರ್ಬಾರ್‍ನ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಜನಿಕಾಂತ್ ಈ ಹೇಳಿಕೆ ನೀಡಿದ್ದಾರೆ.

Be the first to comment

Leave a Reply

Your email address will not be published.


*