ನವರಂಗ್ ಫ್ರೆಂಡ್ಸ್ ಸರ್ಕಲ್‍ನ ನೂತನ ಪದಾಧಿಕಾರಿಗಳ ಆಯ್ಕೆ – ಎನ್.ಎಂ.ಸಿ ನ್ಯೂಸ್

ನವರಂಗ್ ಫ್ರೆಂಡ್ಸ್ ಸರ್ಕಲ್ 6ನೇ ವಿಭಾಗ ಕೃಷ್ಣಾಪುರ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಜರುಗಿತು. 2019-20 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸಂಸ್ಥೆಯ ಗೌರವಾಧ್ಯಕ್ಷ ಗಣೇಶ್ ಭಂಡಾರು ನೇತೃತ್ವದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ಮದಕಡಿಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಪತ್ರಾವೋ, ಜತೆ ಕಾರ್ಯದರ್ಶಿಯಾಗಿ ಕಾಂತರಾಜ್, ಕ್ರೀಡಾನಾಯಕ ಜಯಚಂದ್ರ ಪೂಜಾರಿ, ಉಪನಾಯಕರಾಗು ಶ್ರೀಪತು ಆಚಾರ್ಯ ಆಯ್ಕೆಯಾದರು. ಈ ವೇಳೆ ಸಂಸ್ಥೆಯ ಭರತ್ ರಾಜ್ ಕೃಷ್ಣಾಪುರ, ದಿನೇಶ್ ದೇವಾಡಿಗ, ಆಸೀಪ್ ಮತಿತ್ತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*