ಗ್ರಹಣದಿಂದ ಯಾವ ರಾಶಿ ಮೇಲೆ ಏನೆಲ್ಲಾ ಪ್ರಭಾವ – ಎನ್.ಎಂ.ಸಿ ನ್ಯೂಸ್

ಡಿಸೆಂಬರ್ 26ರಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದ ಸಮಯದ ಪ್ರಕಾರ ಬೆಳಿಗ್ಗೆ 8 ಗಂಟೆ 17 ನಿಮಿಷಕ್ಕೆ ಗ್ರಹಣ ಶುರುವಾಗಲಿದ್ದು, 10 ಗಂಟೆ 57 ನಿಮಿಷದವರೆಗಿರಲಿದೆ. 12 ಗಂಟೆಗಳ ಮೊದಲೇ ಗ್ರಹಣದ ಸೂತಕ ಹಿಡಿಯಲಿದೆ. ಯಾವ ರಾಶಿಗೆ ಏನೆಲ್ಲಾ ಪ್ರಭಾವ ಬೀರಲಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮೇಷ ರಾಶಿ : ಗ್ರಹಣದ ಸಮಯದಲ್ಲಿ ಅವಮಾನವಾಗುವ ಸಾಧ್ಯತೆಯಿದೆ. ಕೆಟ್ಟ ಕೆಲಸಗಳನ್ನು ಮಾಡಬೇಡಿ.

ವೃಷಭ ರಾಶಿ : ದೈಹಿಕ ಮತ್ತು ಮಾನಸಿಕ ತೊಂದರೆ ಕಾಡಬಹುದು.

ಮಿಥುನ : ಸಂಗಾತಿ ಆರೋಗ್ಯದಲ್ಲಿ ಏರುಪಾರಾಗುವ ಸಾಧ್ಯತೆ.

ಕರ್ಕ : ಈ ರಾಶಿಯವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ.

ಸಿಂಹ : ಚಿಂತೆ ಕಾಡುವ ಸಾಧ್ಯತೆಯಿದೆ. ಮನಸ್ಸು ವಿಚಲಿತವಾಗಬಹುದು.

ಕನ್ಯಾ : ಗ್ರಹಣದ ಪ್ರಭಾವದಿಂದ ಕಷ್ಟವುಂಟಾಗುವ ಸಾಧ್ಯತೆಯಿದೆ. ಎಚ್ಚರಿಕೆಯಿಂದಿರಿ.

ತುಲಾ : ಧನ ಲಾಭವಾಗುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ವೃದ್ಧಿಯಾಗಲಿದೆ.

ವೃಶ್ಚಿಕ : ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ.

ಧನು : ಕಷ್ಟ ಎದುರಾಗುವ ಸಾಧ್ಯತೆಯಿದೆ.

ಮಕರ : ಹಾನಿಯಾಗುವ ಸಾಧ್ಯತೆಯಿದ್ದು, ಆಲೋಚಿಸಿ ಹೆಜ್ಜೆಯಿಡಿ.

ಕುಂಭ : ಯಾವುದಾದ್ರೂ ಒಂದು ಬಗೆಯಲ್ಲಿ ಲಾಭವಾಗಲಿದೆ. ಪ್ರಸನ್ನತೆ ಪ್ರಾಪ್ತಿಯಾಗಲಿದೆ.

ಮೀನ : ಗ್ರಹಣದ ದಿನ ನಿಮ್ಮ ಖುಷಿ ವೃದ್ಧಿಯಾಗಲಿದೆ. ಶುಭ ಸಮಾಚಾರ ಸಿಗಲಿದೆ.

Be the first to comment

Leave a Reply

Your email address will not be published.


*