ಲಕ್ಷ್ಮೀ ಮೆಮೋರಿಯಲ್ ಕಾಲೇಜು ಆಫ್ ಫಿಸಿಯೋಥೆರಪಿ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ನ್ಯಾಶನಲ್ ಫಿಸಿಯೋಥೆರಪಿ ಕಾನ್ಫರೆನ್ಸ್ 2019 – ಎನ್.ಎಂ.ಸಿ ನ್ಯೂಸ್

ಲಕ್ಷ್ಮೀ ಮೆಮೋರಿಯಲ್ ಕಾಲೇಜು ಆಫ್ ಫಿಸಿಯೋಥೆರಪಿ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ನ್ಯಾಶನಲ್ ಫಿಸಿಯೋಥೆರಪಿ ಕಾನ್ಫರೆನ್ಸ್ 2019 ಆಯೋಜಿಸಲಾಗಿತ್ತು. ಡಿ. 7, 8 ರ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಥಮ ದಿನವಾದ ಇಂದು ಮುಖ್ಯ ಅತಿಥಿಯಾಗಿ ಶಾಸಕ ಯು ಟಿ ಖಾದರ್ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಶಾಸಕ, ವಿದ್ಯಾರ್ಥಿಗಳು ತಮಗೆ ಸಿಕ್ಕ ಸುವರ್ಣವಾಕಾಶವನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಫಿಸಿಯೋಥೆರಪಿಸ್ಟ್ ಗಳಾಗಿ ಹೊರಹೊಮ್ಮಲು ಪ್ರಯತ್ನ ನಡೆಸಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಜೊತೆಗೆ ಉತ್ತಮ ಮಾರ್ಗದರ್ಶನ ನೀಡುವ ಜವಾಬ್ದಾರಿ ಉಪನ್ಯಾಸಕರ ಕೈಯಲ್ಲಿದೆ. ಶಿಕ್ಷಣ ಕಾಶಿ ಮಂಗಳೂರಿನಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ವಿದ್ಯೆಯ ಜೊತೆ ಸದ್ಗುಣಗಳನ್ನು ಬೆಳೆಸಿ ಎಂದು ಕಿವಿಮಾತು ಹೇಳಿದರು.  ಈ ವೇಳೆ ಕಾಲೇಜು ಮುಖ್ಯಸ್ಥರು, ಗಣ್ಯ ಅತಿಥಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*