ಬಜ್ಪೆ ಮತ್ತು ಮಂಗಳೂರು ಯೋಜನಾ ಕಛೇರಿಯ ಕೇಂದ್ರ ಒಕ್ಕೂಟದ ಪಧಾಧಿಕಾರಿಗಳ ಪದಗ್ರಹಣ ಸಮಾರಂಭ – ಎನ್.ಎಂ.ಸಿ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಂಗಳೂರು ಇವರ ಆಶ್ರಯದಲ್ಲಿ ಬಜ್ಪೆ ಮತ್ತು ಮಂಗಳೂರು ಯೋಜನಾ ಕಛೇರಿಯ ಕೇಂದ್ರ ಒಕ್ಕೂಟದ ಪಧಾಧಿಕಾರಿಗಳ ಪದಗ್ರಹಣ ಸಮಾರಂಭ ದೇವಾಡಿಗರ ಸಮುದಾಯ ಭವನ ಮಣ್ಣಗುಡ್ಡೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ವಿರೇಂದ್ರ ಹೆಗಡೆ ಯು ಟಿ ಖಾದರ್ ಅವರು ಯಾವುದೇ ಕಾರ್ಯಕ್ರಮಕ್ಕೆ ಕರೆದರೆ ತಪ್ಪದೇ ಬರುತ್ತಾರೆ ಎಂದು ಮಾತು ಪ್ರಾರಂಭಿಸಿದ ಖಾವಂದರು, ಧರ್ಮಸ್ಥಳ ಸ್ವಸಹಾಯ ಸಂಘದಿಂದ 9 ಸಾವಿರ ಕೋಟಿ ರುಪಾಯಿ ಸಾಲವನ್ನು ದಾಖಲೆಯಿಲ್ಲದೆ ಜನಸಾಮಾನ್ಯರಿಗೆ ನೀಡಿದ್ದೇವೆ. ಜನರ ನಿಷ್ಠೆ, ಧರ್ಮ, ಸತ್ಯ, ದೇವರ ಆರ್ಶೀವಾದದಿಂದ ಸಾಲ ಮರುಪಾವತಿಯಾಗುತ್ತಿದೆ. ಸಾಲವನ್ನು ಗಂಡಸರಿಗಿಂತ ಮಹಿಳೆಯರು ಸಾಲ ಮರುಪಾವತಿಯನ್ನು ಚಾಚು ತಪ್ಪದೇ ಮಾಡುವುದು ಹಾಗೂ ಪಡೆದ ಸಾಲ ಸರಿಯಾಗಿ ವ್ಯಯಿಸುತ್ತಾರೆ. ಹೀಗೆ ಯೋಚನೆ ಇದ್ದರೆ ಯೋಜನೆ ಎಂಬಂತೆ ಹೆಣ್ಣುಮಕ್ಕಳು ಸ್ವಾವಲಂಬಿಗಳು ಆಗುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಸಕ ಯು ಟಿ ಖಾದರ್, ಹೆಣ್ಣು ಮಕ್ಕಳು ಹುಟ್ಟಿನಾಗಿನಿಂದ ನಾಯಕತ್ವದ ಗುಣವನ್ನು ಹೊಂದಿರುವುದರಿಂದ ಸಮಾಜ ಬದಾಯಿಸುವ ಶಕ್ತಿ ಮಹಿಳೆಯರಿಗಿದೆ. ಮಹಿಳೆಯರಿಗೆ ಆತ್ಮ ವಿಶ್ವಾಸ ಹಾಗೂ ಆರ್ಥಿಕ ಬಲದಿಂದ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡುವಲ್ಲಿ ಹೆಗಡೆಯವರ ಪಾತ್ರ ಪ್ರಮುಖವಾಗಿದೆ ಎಂದರು. ಧ.ಗ್ರಾ.ಯೋಜನೆಯ ಮೂಲಕ ಮನೆಯ ಆರ್ಥಿಕ ನಿರ್ವಹಣೆಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಸ್ವಾವಲಂಬಿಗಳಾಗಿ ಬದುಕು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ದೇವಾಡಿಗ ಸಮುದಾಯ ಭವನಸ ಅಧ್ಯಕ್ಷ ದೇವರಾಜ್, ಶ್ರೀ. ಕ್ಷೇ. ಧ. ಗ್ರಾ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ದ ಕ ಕೇಂದ್ರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಮಾಧವ ಕಣ್ಣಗುಡ್ಡೆ, ಹರೀಶ್‍ಚಂದ್ರ ಕೋಟ್ಯಾನ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*