ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ – ಎನ್.ಎಂ.ಸಿ ನ್ಯೂಸ್

ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಮಹಿಳೆಯರು ಹೇಗಪ್ಪಾ ಇಷ್ಟೊಂದು ಹಣ ಕೊಟ್ಟು ಚಿನ್ನ ಕೊಂಡುಕೊಳ್ಳುವುದು ಎಂದು ಚಿಂತೆ ಮಾಡುತ್ತಿದ್ದರು. ಆದರೆ ಇದೀಗ ಚಿನ್ನದ ದರ ಕೊಂಚ ಕಡಿಮೆಯಾಗಿದ್ದು, ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ಹೌದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 35,450 ರೂಪಾಯಿ ಇದ್ದು, ಒಟ್ಟು 250 ರೂ. ಇಳಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆ 1 ಕೆಜಿಗೆ 47,500 ರೂ. ಇದೆ.

ಇನ್ನು ಕಳೆದ ಮೂರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಇಳಿಕೆ ಕಾಣುತ್ತಿದೆ. ಮುಂಬೈ, ದೆಹಲಿ, ಕೋಲ್ಕತ್ತಾ ಸೇರಿದಂತೆ ಕೆಲವೊಂದು ಮುಖ್ಯ ನಗರಗಳಲ್ಲಿಯೂ ಚಿನ್ನದ ಬೆಲೆ ಇಳಿಕೆ ಕಂಡಿದೆ. ಈ ಇಳಿಕೆಯಿಂದ ಮದುವೆ ಹಾಗೂ ಇನ್ನಿತರ ಸಮಾರಂಭ ಮಾಡುವವರು ನಿಟ್ಟುಸಿರು ಬಿಡುವಂತಾಗಿದೆ.

Be the first to comment

Leave a Reply

Your email address will not be published.


*