ಏಷ್ಯನ್ ಪವರ್ ಲಿಪ್ಟಿಂಗ್‍ನಲ್ಲಿ ಕದ್ರಿಯ ದೀಪಾ ಕೆ.ಎಸ್ ಗೆ 4 ಬೆಳ್ಳಿ ಪದಕ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಕಜಕಿಸ್ತಾನದ ಆಲ್ಮಾಟಿಯಲ್ಲಿ ನಡೆದ ಏಷ್ಯನ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕದ್ರಿಯ ದೀಪಾ ಕೆ.ಎಸ್. ಮಹಿಳೆಯರ 72 ಕಿಲೋ ವಿಭಾಗದಲ್ಲಿ ನಾಲ್ಕು ಬೆಳ್ಳಿ ಪದಕ ಪಡೆದಿದ್ದಾರೆ.

ಬೆಂಚ್ ಪ್ರೆಸ್, ಸ್ಕಾಟ್, ಡೆಡ್ ಲಿಪ್ಟ್ ಮತ್ತು ಓವರ್ ಆಲ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ದೀಪಾ ಬೆಳ್ಳಿ ಪದಕ ಗೆದ್ದುಕೊಂಡರು. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಬಲಿಷ್ಠ ಮಹಿಳೆ ಪ್ರಶಸ್ತಿ ಗೆ ಪಾತ್ರರಾಗಿದ್ದರು. ಕಾಮನ್ ವೆಲ್ತ್ ಪವರ್ ಲಿಪ್ಟಿಂಗ್ ಜೂನಿಯರ್ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದ ಋತ್ವಿಕ್ ಅಲೆವೂರಾಯ ಅವರ ತಾಯಿ ಆಗಿರುವ ದೀಪಾ ಕೆ.ಎಸ್., ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಅವರ ಪತ್ನಿ.

Be the first to comment

Leave a Reply

Your email address will not be published.


*