ಬಾಳೆ ಹಣ್ಣಿನ ವಾಲ್ ಆರ್ಟ್ ಸೇಲ್ ಆದದ್ದು ಬರೋಬ್ಬರಿ 120 ಡಾಲರ್ ಗೆ – ಎನ್.ಎಂ.ಸಿ ನ್ಯೂಸ್

ಒಂದು ಬಾಳೆಹಣ್ಣಿಗೆ ಅಬ್ಬಬ್ಬಾ ಅಂದರೆ ಎಷ್ಟು ರೂಪಾಯಿ ಇರಬಹುದು? 5 ಬೇಡ 10 ಹೋಗಲಿ 15… ಸರಿ 20 ರೂಪಾಯಿ ಎಂದು ಪರಿಗಣಿಸೋಣ. ಆದರೆ ಇಲ್ಲಿ ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತೆ? ಬರೋಬ್ಬರಿ 120 ಸಾವಿರ ಡಾಲರ್ ಗೆ ಮಾರಾಟವಾಗಿದೆ. ಹಾಗಂತ ಅದು ಬರೀ ಬಾಳೆ ಹಣ್ಣಾಗಿ ಮಾರಾಟವಾಗಿದ್ದಲ್ಲ. ಅದೊಂದು ವಾಲ್ ಆರ್ಟ್ ಆಗಿ ಮಾರಾಟವಾಗಿದೆ. ಪ್ರತಿ ವರ್ಷ ಬಾಸೆಲ್, ಸ್ವಿಜರ್ ಲ್ಯಾಂಡ್, ಮಿಯಾಮಿ ಬೀಚ್ ಮತ್ತು ಹಾಂಕಾಂಗ್ ಗಳಲ್ಲಿ ನಡೆಯುವ ಆರ್ಟ್ ಬಾಸೆಲ್ ವಾರ್ಷಿಕ ಕಲಾ ಉತ್ಸವವು ಈ ಬಾರಿ ಮಿಯಾಮಿ ಬೀಚ್ ನಲ್ಲಿ ಏರ್ಪಡಿಸಲಾಗಿತ್ತು ಇಲ್ಲಿ ವಿವಿಧ ಕಲೆಗಳ ಪ್ರದರ್ಶನಗೊಂಡಿವೆ.

ಆದರೆ ಇಲ್ಲಿ ಎಲ್ಲರ ಹುಬ್ಬೇರಿಸಿದ್ದು ಮಾತ್ರ ಬಾಳೆಹಣ್ಣು. ಬಾಳೆ ಹಣ್ಣನ್ನು ಟೇಪ್ ಒಂದರಿಂದ ಗೋಡೆಗೆ ಅಂಟಿಸಲಾಗಿದ್ದ ಕಲೆಯು ಈ ಭಾರೀ ಬೆಲೆಗೆ ಮಾರಾಟವಾಗಿದೆ. ಈ ಕಲೆಯನ್ನು ಕಾಮಿಡಿಯನ್ ಎಂದು ಕರೆಯಲ್ಪಡುವ ಇಟಲಿಯ ಕಲಾವಿದ ಮೌರಿಸಿಯೊ ಕೆಟಲನ್ ಎಂಬುವರು ರಚಿಸಿದ್ದಾರೆ. ಹೆಚ್ಚಾಗಿ ಪ್ರವಾಸ ಮಾಡುವ ವೇಳೆ ಇವರು ಬಾಳೆಹಣ್ಣನ್ನು ತೆಗೆದುಕೊಂಡು ಹೋಗುವುದು ರೂಢಿಯಂತೆ. ಕಲೆಗೆ ಸ್ಫೂರ್ತಿ ಸಿಗಬೇಕು ಎಂಬ ನಿಟ್ಟಿನಲ್ಲಿ ಬಾಳೆಹಣ್ಣೊಂದನ್ನು ತನ್ನ ರೂಮಿನಲ್ಲಿ ನೇತು ಹಾಕಿಕೊಳ್ಳುವ ರೂಢಿಯನ್ನು ಇವರು ಇಟ್ಟುಕೊಂಡಿದ್ದಾರೆ. ಮೊದಮೊದಲು ಕಂಚಿನ ಬಾಳೆಹಣ್ಣನ್ನು ರಚಿಸಿರುವ ಇವರು ಕೊನೆಗೆ ಈ ಐಡಿಯಾ ಮಾಡಿದ್ದಾರೆ. ವಿಪರ್ಯಾಸ ಎಂದರೆ ಇದನ್ನು ಕೊಂಡವರು ಬಾಳೆಹಣ್ಣು ಕೊಳೆತ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ಮಾಹಿತಿಯಾಗಲಿ, ಸೂಚನೆಯನ್ನಾಗಲಿ ನೀಡಲಿಲ್ಲ.

Be the first to comment

Leave a Reply

Your email address will not be published.


*