ಸಾಲುಮರದ ತಿಮ್ಮಕ್ಕನಿಗೆ ಅಬ್ಬೆ, ಮಹಾದೇವಪ್ಪಗೆ ಕೃಷಿ ಪ್ರಶಸ್ತಿ – ಎನ್.ಎಂ.ಸಿ ನ್ಯೂಸ್

ಬಾಗಲಕೋಟೆ: ಬೀಳಗಿ ತಾಲ್ಲೂಕು ಬಾಡಗಂಡಿಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ನೀಡಲಾಗುವ ‘ಅಬ್ಬೆ ಪ್ರಶಸ್ತಿ’ಗೆ ಸಾಲು ಮರದ ತಿಮ್ಮಕ್ಕ ಹಾಗೂ ‘ಕೃಷಿ ಪ್ರಶಸ್ತಿ’ಗೆ ಸಮೀಪದ ರೊಳ್ಳಿ ಗ್ರಾಮದ ಮಹಾದೇವಪ್ಪ ಚಲವಾದಿ ಆಯ್ಕೆಯಾಗಿದ್ದಾರೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅವರ ತಂದೆ ರುದ್ರಗೌಡ ಪಾಟೀಲ ಸ್ಮರಣಾರ್ಥವಾಗಿ ಕೃಷಿ ಪ್ರಶಸ್ತಿ ಹಾಗೂ ತಾಯಿ ಈರಮ್ಮ ಸ್ಮರಣಾರ್ಥ ಅಬ್ಬೆ ಪ್ರಶಸ್ತಿಯನ್ನು ಶಿಕ್ಷಣ ಪ್ರತಿಷ್ಠಾನ ದಿಂದ ಪ್ರತಿ ವರ್ಷ ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ?1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ.

ಬಾಡಗಂಡಿಯ ಬಾಪೂಜಿ ಅಂತರರಾಷ್ಟ್ರೀಯ ವಸತಿ ಶಾಲೆಯ ಆವರಣದಲ್ಲಿ ಡಿಸೆಂಬರ್ 7ರಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Be the first to comment

Leave a Reply

Your email address will not be published.


*