ದೇಶದ ಮಹಿಳೆಯರೇ ಇಂದು ದೀಪಾವಳಿ, ಹೊಸ ವರ್ಷ ಆಚರಿಸಿ: ನಟಿ ರಾಖಿ ಸಾವಂತ್ ಕರೆ – ಎನ್.ಎಂ.ಸಿ ನ್ಯೂಸ್

ಮುಂಬೈ: ಪ್ರಿಯಾಂಕ ಹೆಗ್ಡೆ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಗಳ ಮೇಲೆ ಎನ್ ಕೌಂಟರ್ ನಡೆಸಿದ ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ನಡುವೆ ಬಾಲಿವುಡ್ ನಟಿ ರಾಖಿ ಸಾವಂತ್ ಕೂಡ ತನ್ನ ಇನ್ ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ದೇಶದ ಮಹಿಳೆಯರೇ ಇಂದು ದೀಪಾವಳಿ, ಈದ್, ಹೊಸ ವರ್ಷ ಆಚರಿಸಿ ಎಂದು ಕರೆನೀಡಿದ್ದಾರೆ.

ರಾಖಿ ತನ್ನ ವಿಡಿಯೋದಲ್ಲಿ ಭಾರತದ ಎಲ್ಲ ಮಹಿಳೆಯರಿಗೆ ಇಂದು ದೀಪಾವಳಿ, ಈದ್ ಹಾಗೂ ಹೊಸ ವರ್ಷ. ಏಕೆಂದರೆ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಇಂದು ಬೆಳಗ್ಗೆ ಎನ್‍ಕೌಂಟರ್ ಮಾಡಲಾಗಿದೆ. ಪ್ರಧಾನಿ ಮೋದಿ ಅವರಿಗೆ, ಕರ್ನಾಟಕ, ತೆಲಂಗಾಣ ಸಿಎಂ ಹಾಗೂ ತೆಲಂಗಾಣ ಪೊಲೀಸರಿಗೆ ನಾನು ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ’ ಎಂದಿದ್ದಾಳೆ.

‘ತೆಲಂಗಾಣ ಆಗಲಿ, ಭಾರತ ಆಗಲಿ ಪ್ರತಿಯೊಬ್ಬ ಮಹಿಳೆ ಯಾರ ಭಯವಿಲ್ಲದೆ ತಲೆ ಎತ್ತು ಸ್ವಾತಂತ್ರ್ಯದಿಂದ ಓಡಾಡಬಹುದು. ಏಕೆಂದರೆ ಈಗ ಯಾವೊಬ್ಬ ಆರೋಪಿ ಕೂಡ ತಪ್ಪಿಸಿಕೊಂಡು ಓಡಿ ಹೋಗುವುದಕ್ಕೆ ಆಗುವುದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತೆ. ಇನ್ನು ಮುಂದೆ ರೇಪಿಸ್ಟ್ ಗಳನ್ನು ಎನ್‍ಕೌಂಟರ್ ಮಾಡಲಾಗುತ್ತದೆ. ಎಲ್ಲಾ ಹುಡುಗಿರೇ ಇಂದು ದೀಪಾವಳಿ, ಈದ್ ಹಾಗೂ ಹೊಸ ವರ್ಷವನ್ನು ಆಚರಿ ಎಂದು ಹೇಳಿದ್ದಾಳೆ.

 

Be the first to comment

Leave a Reply

Your email address will not be published.


*