ಉಳ್ಳಾಲದಲ್ಲಿ ಪ್ರಪ್ರಥಮ ಕೌಟುಂಬಿಕ ರಕ್ತದಾನ ಶಿಬಿರ – ಎನ್.ಎಂ.ಸಿ ನ್ಯೂಸ್

ಎಂ.ಕೆ ಫ್ಯಾಮಿಲಿ ಗ್ರೂಪ್ ಉಳ್ಳಾಲ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ರಿ. ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕೌಟುಂಬಿಕ ರಕ್ತದಾನ ಶಿಬಿರವು ಉಳ್ಳಾಲದಲ್ಲಿ ಡಿಸೆಂಬರ್ 08ರಂದು ನಡೆಯಲಿದೆ.

ಕುಟುಂಬದ ಸದಸ್ಯರನ್ನು ಒಂದೆಡೆ ಒಗ್ಗೂಡಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಎಂ ಕೆ ಫ್ಯಾಮಿಲಿ ಗ್ರೂಪ್ ಈಗಾಗಲೇ ಕುಟುಂಬದ ಹಲವಾರು ಹೆಣ್ಣು ಮಕ್ಕಳ ಮದುವೆಗೆ ಕೈಲಾದ ಮಟ್ಟಿಗೆ ನೆರವು ನೀಡುತ್ತಿದೆ. ಅದರೊಂದಿಗೆ ಈ ಬಾರಿ ಫ್ಯಾಮಿಲಿ ಗ್ರೂಪ್ ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು, ಕುಟುಂಬ ಸದಸ್ಯರಿಗೆ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಹಾಗೂ ರಕ್ತದಾನ ಮಾಡಲು ಉತ್ತೇಜಿಸುವ ಸಲುವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲು ತೀರ್ಮಾನಿಸಿದೆ.
ಈ ಮೂಲಕ ರಕ್ತದಾನಿಗಳ ಕುಟುಂಬ ಎಂಬ ಹೆಗ್ಗಳಿಕೆಯನ್ನು ಪಡೆಯಲು ಸಿದ್ಧತೆಯನ್ನೂ ನಡೆಸಿದೆ.

ಅದರಂತೆ ಇದೇ ಬರುವ ಡಿಸೆಂಬರ್ 08ರಂದು ಉಳ್ಳಾಲ ಅಳೇಕಲದ ಎಂ ಕೆ ಹೌಸ್ ವಠಾರದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ರಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕೆಎಂಸಿ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ಕುಟುಂಬದ ಹಿರಿಯರಾದ ಮಹೂರ್ಂ ಅಬ್ದುಲ್ ಖಾದರ್, ಮಹೂರ್ಂ ಅವ್ವಮ್ಮ ಹಾಗೂ ಮಹೂರ್ಂ ಮುಹಮ್ಮದ್ ಬಿ ಇವರ ಸ್ಮರಣಾರ್ಥವಾಗಿ ಬೃಹತ್ ಕೌಟುಂಬಿಕ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಯಶಸ್ವಿಗೊಳಿಸಬೇಕೆಂದು ನಿಮ್ಮೆಲ್ಲರಲ್ಲಿ ವಿನಮ್ರವಾಗಿ ವಿನಂತಿಸುತ್ತಿದ್ದೇವೆ.

Be the first to comment

Leave a Reply

Your email address will not be published.


*