ಮಂಗಳೂರಿನ 7 ಮಂದಿ ಅಂತರ್ ರಾಜ್ಯ ಆರೋಪಿಗಳ ಬಂಧನ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಮಂಗಳೂರಿನ ಬಲ್ಮಠ ಸಮೀಪದ ಅಪಾರ್ಟ್ ಮೆಂಟ್‍ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರಾಕೇಶ್ ಬೋನಿಪಾಸ್ ಡಿ” ಸೋಜಾ, ಅಶೋಕ್ ಬಂಡ್ರಗಾರ್, ಗಣೇಶ್ ಬಾಪು ಪರಾಬ್, ಶಾಹೀರ್ ಮೊಹಮ್ಮದ್, ಜನಾರ್ಧನ ಆಚಾರ್ಯ, ಚಂದನ್ ಆಚಾರ್ಯ, ಪುರುಷೊತ್ತಮ್ ಆಚಾರ್ಯ ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 9 ರಂದು ನಡೆ ಈ ಪ್ರಕರಣದಲ್ಲಿ ಅಪಾರ್ಟ್ ಮೆಂಟ್ ನ ಡಕ್ಟ್ ವೆಂಟಿಲೇಟರ್ ಮೂಲಕ 6 ನೇ ಮಹಡಿಯಲ್ಲಿರುವ ಪ್ಲಾಟ್ ಗೆ ನುಗ್ಗಿ ಅಲ್ಲಿಂದ ಸುಮಾರು 65ಸಾವಿರ ರೂಪಾಯಿ ನಗದು ಹಾಗೂ 35 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಕಿವಿಯೋಲೆ, ಚಿನ್ನದ ಬಳೆಗಳು, ಚಿನ್ನದ ಬ್ರಾಸ್ ಲೈಟ್ , ಚಿನ್ನದ ನೆಕ್ಲೇಸ್, ಡೈಮಂಡ್ ನೆಕ್ಲೇಸ್, ಡೈಮಂಡ್ ರಿಂಗ್, ಚಿನ್ನದ ವಾಚ್, ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದರು.ಕಳ್ಳತನ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೆÇಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 34 ಲಕ್ಷ ರೂ ಗಳು ಮೊತ್ತದ ಬಂಗಾರದ ಮತ್ತು ವಜ್ರದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಚಿನ್ನ ಕರಗಿಸುವ ಯಂತ್ರ ಕೃತ್ಯಕ್ಕೆ ಉಪಯೋಗಿಸಿದ ಒಂದು ಆಲ್ಟೊ ಕಾರ್, 1 ಹುಂಡೈ ಕಾರ್, ಬುಲೆಟ್ ಮೋಟಾರ್ ಸೈಕಲ್ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Be the first to comment

Leave a Reply

Your email address will not be published.


*