ಜಗತ್ತಿನ ಅತ್ಯಂತ ಜನಪ್ರಿಯ 100 ನಗರಗಳಲ್ಲಿ ಸ್ಥಾನಗಳಿಸಿದ ಬೆಂಗಳೂರು !

ಬ್ರಿಟನ್ ಮೂಲದ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ ಏಷ್ಯಾದ ಅತ್ಯಂತ ಆಕರ್ಷಕ ಮಾರುಕಟ್ಟೆಗಳಲ್ಲಿ ಭಾರತ ಕೂಡ ಒಂದಾಗಿದೆ. ಜಗತ್ತಿನ ಅತ್ಯಂತ ಜನಪ್ರಿಯ 100 ನಗರಗಳಲ್ಲಿ ಭಾರತದ ಏಳು ನಗರಗಳು ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಸಿಲಿಕಾನ್ ಸಿಟಿ ಕೂಡ ತನ್ನ ಸ್ಥಾನಗಳಿಸಿದೆ. ರಾಜಧಾನಿ ದೆಹಲಿ, ಮುಂಬೈ, ಆಗ್ರಾ, ಚೆನ್ನೈ, ಬೆಂಗಳೂರು, ಜೈಪುರ ಹಾಗೂ ಕೋಲ್ಕತ್ತಾ 11ನೇ ಸ್ಥಾನ ಪಡೆದಿದೆ.

ವಿಶ್ವದ ಜನಪ್ರಿಯ ನಗರಗಳ ಪಟ್ಟಿಯಲ್ಲಿ ಏಷ್ಯಾದ 43 ನಗರಗಳು ಸ್ಥಾನ ಪಡೆದಿವೆ.ಯೂರೋಮಾನಿಟರ್ ಇಂಟರ್‍ನ್ಯಾಷನಲ್ ನಡೆಸಿದ ಅಧ್ಯಯನದಲ್ಲಿ, ಪ್ರವಾಸಿಗರ ಆಗಮನ ಹಾಗೂ ಆಯಾ ನಗರಗಳಲ್ಲಿ ಅವರು ಕಳೆಯುವ ಸಮಯದ ಆಧಾರದ ಮೇಲೆ ಈ ರ್ಯಾಂಕಿಂಗ್ ನೀಡಲಾಗಿದೆ. ಇದೇ ಪಟ್ಟಿಯಲ್ಲಿ ಹಾಂಕಾಂಗ್ ಅಗ್ರಸ್ಥಾನದಲ್ಲಿದ್ದು, ಬ್ಯಾಂಕಾಕ್, ಲಂಡನ್, ಮಕಾವೂ ಹಾಗೂ ಸಿಂಗಪುರಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

Be the first to comment

Leave a Reply

Your email address will not be published.


*