ಜಯಲಲಿತಾ ಬಯೋಪಿಕ್‍ನಲ್ಲಿ ಪ್ರಾಣ ಸ್ನೇಹಿತೆಯಾಗಿ ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಮಣಿ – ಎನ್.ಎಂ.ಸಿ ನ್ಯೂಸ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ‘ತಲೈವಿ’ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣೌತ್ ನಟಿಸುತ್ತಿರುವುದು ಗೊತ್ತಿರುವ ವಿಷಯ. ಆದರೆ, ಜಯಲಲಿತಾ ಅವರ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಶಿಕಲಾ ಅವರ ರೋಲ್‍ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಯೊಂದು ಕಾಲಿವುಡ್ ಅಂಗಳದಲ್ಲಿತ್ತು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಹೌದು, ತಮಿಳರ ಪಾಲಿನ ಅಮ್ಮನ ಸ್ನೇಹಿತೆ ಚಿನ್ನಮ್ಮ(ಶಶಿಕಲಾ) ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟಿ ಪ್ರಿಯಾಮಣಿ ಅಭಿನಯಿಸಲಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಶಿಕಲಾ ಅವರ ರೋಲ್ ಅನ್ನು ಪ್ರಿಯಾ ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ.

Be the first to comment

Leave a Reply

Your email address will not be published.


*