ನಾನೇ ದೀಪಿಕಾಳ ಗಂಡ ಎಂದ ಶೈನ್ ಶೆಟ್ಟಿ; ನಾಗಿಣಿಯ ತಿರುಗೇಟು ಹೇಗಿತ್ತು..? – ಎನ್.ಎಂ.ಸಿ ನ್ಯೂಸ್

ಬಿಗ್ ಬಾಸ್ ಮನೆಯೊಳಗೆ ಜೋಡಿ ಜೀವಗಳಿಗೆ ಏನೂ ಕಡಿಮೆಯಿಲ್ಲ. ಕಳೆದೊಂದು ವಾರದಿಂದ ಶೈನ್ ಶೆಟ್ಟಿ ಬೇಕೆಂದೇ ದೀಪಿಕಾ ದಾಸ್ ರನ್ನು ರೇಗಿಸುತ್ತಿದ್ದಾರೆ. ನಿನ್ನೆಯ ದಿನವಂತೂ ಶೈನ್ ದೀಪಿಕಾರ ಕಾಲೆಳೆಯುತ್ತಾ ವಾಸುಕಿ ಬಳಿ ಮುಂದೊಂದು ದಿನ ಇಬ್ಬರು ಮಕ್ಕಳಾದ ಮೇಲೆ ದೀಪಿಕಾ ನಿಮ್ಮ ಮುಂದೆ ಬರುತ್ತಾರೆ. ಆಗ ನಿಮಗೆ ಶಾಕ್ ಆಗುತ್ತದೆ. ಆಗ ನಾನು ಹತ್ತಿರ ಬರುತ್ತೇನೆ. ಯಾಕೆ ಹೇಳಿ? ನಾನೇ ದೀಪಿಕಾ ಗಂಡ ಅಂತ ರೇಗಿಸುತ್ತಾರೆ.

ಇದಕ್ಕೆ ದೀಪಿಕಾ ಒಂದು ಉರಿನೋಟ ಕೊಟ್ಟು, ಎಂತಾ ಜೋಕ್ ಹೇಳಿದಿರಿ ಶೈನ್ ಎಂದು ಟಾಂಗ್ ಕೊಡುತ್ತಾರೆ. ಆದರೆ ಶೈನ್ ಈ ರೀತಿ ಬೇಕೆಂದೇ ದೀಪಿಕಾ ಹಿಂದೆ ಸುತ್ತುತ್ತಿರುವುದು ಪ್ರೇಕ್ಷಕರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಇದರಿಂದ ನಿಮ್ಮ ಇಮೇಜ್ ಹಾಳಾಗುತ್ತದೆ. ಹಾಳು ಮಾಡಿಕೊಳ್ಳಬೇಡಿ ಎಂದು ಶೈನ್ ಗೆ ಸಾಮಾಜಿಕ ಜಾಲತಾಣದ ಮೂಲಕ ಸಲಹೆ ಕೊಡತ್ತಿದ್ದಾರೆ.

Be the first to comment

Leave a Reply

Your email address will not be published.


*