ನೈಜೀರಿಯಾದ ಕಡಲಕಿನಾರೆ ನಾಟಿಕಲ್ ಬಳಿ 18 ಭಾರತೀಯರು ಸೇರಿದಂತೆ 19 ಮಂದಿ ಸಾಗರಯಾನಿಗಳ ಅಪಹರಣ – ಎನ್.ಎಂ.ಸಿ ನ್ಯೂಸ್

ಮುಂಬೈ: ಹದಿನೆಂಟು ಮಂದಿ ಭಾರತೀಯರು ಸೇರಿದಂತೆ 19 ಮಂದಿ ಸಾಗರಯಾನಿಗಳನ್ನು ನೈಜೀರಿಯಾದ ಬಾನಿಯ ದಕ್ಷಿಣಕ್ಕಿರುವ ಕಡಲಕಿನಾರೆ ಸಮೀಪದ 66ನೇ ನಾಟಿಕಲ್ ಮೈಲು ಬಳಿ ಕಡಲ್ಗಳ್ಳರು ಅಪಹರಿಸಿದ್ದಾರೆ. ಈ ಅಪಹರಣಕ್ಕೆ ಮುನ್ನ ಕಡಲ್ಗಳ್ಳಲರು ಹಡಗಿನ ಮುಖ್ಯಾಧಿಕಾರಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಮುಂಬೈನಲ್ಲಿರುವ ಅವರ ಪತ್ನಿಗೆ ಕರೆ ಮಾಡಿದ್ದಾರೆ.

ಭದ್ರತಾ ಕಾರಣಕ್ಕಾಗಿ ಅಧಿಕಾರಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಅವರ ಚಲನವಲನಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಎರಡು ಸುದ್ದಿ ಜಾಲತಾಣಗಳ ವರದಿಯ ಪ್ರಕಾರ, ಸಶಸ್ತ್ರ ಕಡಲ್ಗಳ್ಳರು ಆಂಗ್ಲೋ ಈಸ್ಟರ್ನ್ ನಿರ್ವಹಣೆಯ ನವ್ ಕನ್‍ಸ್ಟಲೇಶನ್ ಮೇಲೆ ದಾಳಿ ನಡೆಸಿ ಹಡಗನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಹಡಗಿಗೆ ಯಾವುದೇ ಬೆಂಗಾವಲು ಇರಲಿಲ್ಲ ಎನ್ನಲಾಗಿದೆ. ಈ ಪ್ರದೇಶ ಕಡಲ್ಗಳ್ಳರ ತಾಣವಾಗಿದ್ದು, 26 ಮಂದಿ ಸಿಬ್ಬಂದಿಯ ಪೈಕಿ ಒಬ್ಬರು ಟರ್ಕಿಯವರು. ಏಳು ಮಂದಿ ಹಡಗಿನಲ್ಲೇ ಉಳಿದಿದ್ದಾರೆ ಎನ್ನಲಾಗಿದೆ. ಹಾಂಕಾಂಗ್ ಮೂಲದ ಆಂಗ್ಲೋ ಈಸ್ವರ್ನ್ ಕಂಪೆನಿಯಲ್ಲಿ ತಮ್ಮ ಮಗ 15 ವರ್ಷದಿಂದ ಉದ್ಯೋಗದಲ್ಲಿರುವುದಾಗಿ ಮುಖ್ಯಾಧಿಕಾರಿಯ ತಂದೆ ವಿವರಿಸಿದ್ದಾರೆ.

“ಕ್ಯಾಪ್ಟನ್ ಶ್ರೇಣಿಯ ಇವರು ಹಡಗಿನ ಮುಖ್ಯಾಧಿಕಾರಿ. ಮಂಗಳವಾರ ರಾತ್ರಿ 10:15ರ ಸುಮಾರಿಗೆ ಪತ್ನಿಗೆ ಕರೆ ಮಾಡಿ ಕರ್ತವ್ಯಕ್ಕೆ ಹೋಗುತ್ತಿರುವುದಾಗಿ ಹೇಳಿದ್ದರು. ಬುಧವಾರ ಬೆಳಗ್ಗೆ ಕಂಪೆನಿಯಿಂದ ಕರೆ ಬಂದಾಗ ಆಘಾತವಾಯಿತು” ಎಂದು ಹೇಳಿದ್ದಾರೆ.

Be the first to comment

Leave a Reply

Your email address will not be published.


*