ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಆರೋಪಿಗೆ ಸಾಯುವರೆಗೂ ಜೈಲು ಶಿಕ್ಷೆ ವಿಧಿಸಿದ ಕಾಸರಗೋಡು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ – ಎನ್.ಎಂ.ಸಿ ನ್ಯೂಸ್

ಕಾಸರಗೋಡು : ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಕೊನೆಯುಸಿರು ತನಕ ಸಜೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಕರಿವೇಡಗಂ ಶಂಕ್ರಪಾಡಿಯ ವಿ . ಎಸ್ ರವೀಂದ್ರನ್ ( 46) ಕಠಿಣ ಸಜೆಗೊಳಗಾದ ಆರೋಪಿ. 25 ಸಾವಿರ ರೂ .ದಂಡ ವಿಧಿಸಲಾಗಿದೆ.

ಫೋಕ್ಸೋ ಕಾಯ್ದೆ ತಿದ್ದುಪಡಿ ಜಾರಿಗೆ ಬಂದ ಬಳಿಕ ಕೇರಳ ರಾಜ್ಯದ ಮೊದಲ ತೀರ್ಪು ಆಗಿದೆ . 2018 ರ ಅಕ್ಟೋಬರ್ ಒಂಭತ್ತರಂದು ಘಟನೆ ನಡೆದಿತ್ತು . ಆರೋಪಿಯ ಮನೆಗೆ ಆಟವಾಡಲು ಬಂದಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ 22 ಸಾಕ್ಷಿಗಳನ್ನು ವಿಸ್ತರಿಸಲಾಗಿತ್ತು. 23 ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು .ಬೇಡಡ್ಕ ಪೆÇಲೀಸರು ಪ್ರಕರಣ ದಾಖಲಿಸಿದ್ದು , ಡಿ ವೈ ಎಸ್ ಪಿ ಹರೀಶ್ಚಂದ್ರ ನಾಯಕ್ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಟರ್ ಪರ ಪ್ರಕಾಶ್ ಅಮ್ಮಣ್ಣಾಯ ರವರು ಹಾಜರಾಗಿದ್ದರು.

Be the first to comment

Leave a Reply

Your email address will not be published.


*