ಪುತ್ತೂರಿನಲ್ಲಿ ಶೂಟೌಟ್ ಪ್ರಕರಣ : ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು – ಎನ್.ಎಂ.ಸಿ ನ್ಯೂಸ್

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ನ.26ರಂದು ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಕೇಸು ದಾಖಲಾಗಿದ್ದು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುಕ್ಕಿಗಟ್ಟು ನೀರ್ಕಜೆ ನಿವಾಸಿ ಹನೀಫ್ ಜೋಗಿ (36) ಬಂಧಿತ ಆರೋಪಿ.

ಗಾಯಾಳು ಅಬ್ದುಲ್ ಖಾದರ್ ಅವರು ನೀಡಿದ ದೂರಿನಂತೆ ತನಿಖೆ ನಡೆಸುತ್ತಿರುವ ಪೊಲೀಸರು ಗುಂಡ್ಯದ  ಚೆಕ್‍ಪೋಸ್ಟ್ ಬಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಹನೀಫ್ ಜೋಗಿಯನ್ನು ನ್ಯಾಯಾಧೀಶದ ಮುಂದೆ ಹಾಜಪೊಲೀಸ್ರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

 

 

 

Be the first to comment

Leave a Reply

Your email address will not be published.


*