ಸದನದ ಬಾವಿಗೆ ಇಳಿಯಬೇಡಿ; ಇಳಿದರೆ ನಿಮ್ಮ ವಿರುದ್ಧ ಸೂಕ್ತ ಕ್ರಮ – ಲೋಕಸಭಾ ಸ್ಪೀಕರ್ – ಎನ್.ಎಂ.ಸಿ ನ್ಯೂಸ್

ಇಂದಿನಿಂದ ಯಾರೂ ಸದನ ಬಾವಿಗಿಳಿದು ಪ್ರತಿಭಟನೆ ಮಾಡುವಂತಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇಂದು ಪ್ರತಿಪಕ್ಷಗಳ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ . ಇಂದು ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ರೈತರ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ , ಸದನದ ಬಾವಿಗಿಳಿದು ಪ್ರತಿಭಟನೆ ಮಾಡಲು ಮುಂದಾದ ಕಾಂಗ್ರೆಸ್ , ಡಿಎಂಕೆ , ಟಿಎಂಸಿ ಹಾಗೂ ಇತರೆ ಪ್ರತಿಪಕ್ಷಗಳ ಸದಸ್ಯರಿಗೆ ಸದನದ ಬಾವಿಗೆ ಇಳಿಯಬೇಡಿ . ಇಳಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು .

ಸದನದ ಬಾವಿಯಲ್ಲಿ ಪ್ರತಿಭಟಿಸುವ ಪೂರ್ವ ನಿದರ್ಶನಗಳು ಇದ್ದಿರಬಹುದು . ಆದರೆ ಇಂದಿನಿಂದ , ಯಾವುದೇ ( ಸದಸ್ಯ ) ಬಾವಿಯಲ್ಲಿ ಪ್ರತಿಭಟನೆ ಮಾಡುವುವಂತಿಲ್ಲ. ಒಂದು ವೇಳೆ ಪ್ರತಿಭಟನೆ ಮಾಡಿದರೆ ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ . ಇನ್ನು ಶೂನ್ಯವೇಳೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಭಾ ನಾಯಕ ಅಧಿರ್ ರಂಜನ್ ಚೌಧರಿ ಅವರು, ಗಾಂಧಿ ಕುಟುಂಬಕ್ಕೆ ಎಸ್‍ಪಿಜಿ ಭದ್ರತೆ ವಾಪಸ್ ಪಡೆಯುವ ವಿಷಯ ಪ್ರಸ್ತಾಪಿಸಿ ಎಸ್‍ಪಿಜಿ ರಕ್ಷಣೆ , ಸಾಮಾನ್ಯ ರಕ್ಷಣೆಯಲ್ಲ ಎಂದು ಹೇಳಿದರು

Be the first to comment

Leave a Reply

Your email address will not be published.


*