ನ.25ರಂದು ಹೊಸ ಇತಿಹಾಸ ಬರೆಯಲಿರುವ ಇಸ್ರೋ: 14 ಉಪಗ್ರಹಗಳ ಉಡಾವಣೆಗೆ ಸಕಲ ಸಿದ್ಧತೆ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಇದುವರೆಗೆ ಹಲವು ಮೈಲುಗಲ್ಲುಗಳನ್ನು ಸಾಧಿಸಿ, ಇತಿಹಾಸ ಸೃಷ್ಠಿಸಿರುವ ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೀಗ ಮತ್ತೊಂದು ಹೊಸ ಹೆಜ್ಜೆಗೆ ಸಜ್ಜಾಗಿದೆ. ನವೆಂಬರ್ 25ರಂದು ಅಮೇರಿಕಾದ 13 ವಾಣಿಜ್ಯ ಪುಟ್ಟ ಉಪಗ್ರಹಳನ್ನು ಒಳಗೊಂಡು ಕಾಟೋಸ್ಯಾಟ್-3 ಇಮೆಜಿಂಗ್ ಅಂಡ್ ಮಾಪಿಂಗ್ ಸ್ಯಾಟಿಲೈಟ್ ನನ್ನು ಉಡ್ಡಯನ ಮಾಡಲು ಸಕಲ ಸಿದ್ಧತೆ ಕೈಗೊಂಡಿದೆ.

ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ- ಸಿ47 ಉಪಗ್ರಹ ಉಡಾವಣಾ ನೌಕೆಯ ಮೂಲಕ ನವೆಂಬರ್ 25ರಂದು ಅಮೆರಿಕಾದ  13 ವಾಣಿಜ್ಯ ಪುಟ್ಟ ಉಪಗ್ರಹಳು ಸೇರಿದಂತೆ 14 ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಉಡಾವಣೆ ಮಾಡಲಿದ್ದೇವೆ.


ಈಗಾಗಲೇ ಎಲ್ಲಾ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ವಾತಾವರಣ ಪರಿಸ್ಥಿತಿಗೆ ಒಳಪ್ಟು ನವೆಂಬರ್ 25ರ ಸೋಮವಾರದಂದು ಬೆಳಿಗ್ಗೆ 9.28ಕ್ಕೆ ಕಾರ್ಟೋಸ್ಯಾಟ್-3 ಮತ್ತು ಇತರೆ 13 ಕಮರ್ಷಿಲ್ ನ್ಯಾನೋ ಸ್ಯಾಟಿಲೈಟ್ ಗಳನ್ನು ನಭಕ್ಕೆ ಪಿಎಸ್ ಎಲ್ ವಿ – ಸಿ47 ಉಪಗ್ರಹ ಉಡಾವಣಾ ವಾಹನ ಸೇರಿಸಲಿದೆ. ಈ ಮೂಲಕ ಹೊಸ ಹೆಜ್ಜೆಯನ್ನು ಇಸ್ರೋ ಇರಿಸಲಿದೆ ಎಂದು ತಿಳಿಸಿದೆ.

Be the first to comment

Leave a Reply

Your email address will not be published.


*