ಸ್ಕೇಟಿಂಗ್‍ನಲ್ಲಿ ಸಾಧನೆ ಮಾಡಿದ ಮಹಮ್ಮದ್ ಶಮಿಲ್ ಅರ್ಷಾದ್ – ಎನ್.ಎಂ.ಸಿ ನ್ಯೂಸ್

ಸ್ಕೇಟಿಂಗ್.. ಕಾಲಿಗೆ ಚಕ್ರ ಕಟ್ಟಿಕೊಂಡು ವೇಗವಾಗಿ ಓಡುವ ಜನಪ್ರಿಯ ಕ್ರೀಡೆ. ಸ್ಕೇಟಿಂಗ್ ಮಾಡಲು ಸತತ ಪ್ರಯತ್ನ ಇರಲೇಬೇಕು. ಇಲ್ಲವಾದಲ್ಲಿ ಈ ಕಲೆ ಸುಲಭವಾಗಿ ಒಲಿಯುವುದಿಲ್ಲ. ಸತತ ಪ್ರಯತ್ನಗಳಿಂದಲೇ ಈ ಕ್ರೀಡೆಯನ್ನು ಅಭ್ಯಯಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಬಾಲ ಪ್ರತಿಭೆ ಮಹಮ್ಮದ್ ಶಮಿಲ್ ಅರ್ಷಾದ್. ದಿ ಯೆನಪೊಯಾ ಶಾಲೆಯ ವಿದ್ಯಾರ್ಥಿಯಾಗಿರುವ ಶಮಿಲ್ ಸ್ಕೇಟಿಂಗ್ ಮಾಡಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ನವೆಂಬರ್ 8 ರಿಂದ 9 ರವರೆಗೆ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನಡೆದ ಸ್ಪೀಡ್ ರೋಲರ್ ಸ್ಕೇಟಿಂಗ್‍ನ ಜಿಲ್ಲಾ ಆಯ್ಕೆ ಪ್ರಕ್ರಿಯೆಯಲ್ಲಿ ಶಮಿಲ್ 1 ಚಿನ್ನ ಹಾಗೂ 2 ಬೆಳ್ಳಿ ಪದಕವನ್ನು ಬಾಚಿಕೊಂಡಿದ್ದಾರೆ. ಮೈಸೂರಿನಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‍ನ ಆಶ್ರಯದಲ್ಲಿ ನ್ಯಾಶನಲ್ ಸ್ಕಾಲರ್‍ಶಿಪ್ ಆಯ್ಕೆ ಪಕ್ರಿಯೆಯ ಕುರಿತಾಗಿ ನ. 12 ರಿಂದ 17 ರ ವರೆಗೆ ನಡೆದ 35ನೇ ರಾಜ್ಯ ರೋಲರ್ ಸ್ಕೇಟಿಂಗ್‍ನಲ್ಲಿ 1 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಂತೆಯೇ ಡಿ. 13 ರಿಂದ 22 ರವರೆಗೆ VIZAG ನಲ್ಲಿ ನಡೆಯುವ ಆರ್‍ಎಸ್‍ಎಫ್‍ಐ ನ್ಯಾಶನಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು. ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನಲ್ಲಿ ತರಬೇತಿ ಪಡೆಯುತ್ತಿದ್ದು, ಮೋಹನ್‍ದಾಸ್ ಕೆ ಮತ್ತು ಜಯರಾಜ್ ಅವರಲ್ಲಿ ತರಬೇತಿ ಪಡೆದಿದ್ದಾರೆ.

Be the first to comment

Leave a Reply

Your email address will not be published.


*