ಡಿ.26 ರಂದು ನಡೆಯಲಿದೆ ಸೂರ್ಯಗ್ರಹಣ ದೃಶ್ಯ ವಿಸ್ಮಯ; ಕಾಸರಗೋಡಿನ ಚೆರವತ್ತೂರಲ್ಲಿ ಮೊದಲು ಗೋಚರ – ಎನ್.ಎಂ.ಸಿ ನ್ಯೂಸ್

ಕಾಸರಗೋಡು: ಡಿಸೆಂಬರ್ 26ರಂದು ನಡೆಯುವ ಸೂರ್ಯ ಗ್ರಹಣಕ್ಕೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಭಾರತ ಸೇರಿದಂತೆ ವಿದೇಶಗಳಲ್ಲಿ ಈ ಗ್ರಹಣ ಕಾಣಿಸಿಕೊಳ್ಳಲಿದೆ. ಬೆಳಗ್ಗೆ 8.04ಕ್ಕೆ ಆರಂಭಗೊಳ್ಳುವ ಭಾಗಶಃ ಗ್ರಹಣ 9.25ರ ವೇಳೆಗೆ ಪೂರ್ಣ ರೂಪ ತಲಪಲಿದೆ. ಮೂರು ನಿಮಿಷ, 12 ಸೆಕಂಡ್ ವರೆಗೆ ಮುಂದುವರಿದು 11.04ರ ವೇಳೆಗೆ ಸಮಾಪ್ತಿಗೊಳ್ಳಲಿದೆ. ಮಂಗಳೂರಿನಿಂದ ಬೇಪೂರು ವರೆಗಿನ ವಲಯಗಳಲ್ಲಿ ಅಧಾರ್ಂಶವಾಗಿ ಗೋಚರಿಸಲಿದೆ. ಖತಾರ್, ಯು.ಎ.ಇ., ಒಮಾನ್ ದೇಶಗಳಲ್ಲಿ ಗ್ರಹಣ ಆರಂಭಗೊಳ್ಳಲಿದೆ. ಕಣ್ಣೂರು ವಯನಾಡ್ ಜಿಲ್ಲೆಗಳ ಮಾತಮಂಗಲಂ, ಪನ್ನಿಯೂರು, ಪೇರಾವೂರು, ಮೀನಾಂಗಾಡಿ, ಚುಳ್ಳಿಯೋಡ್ ಪ್ರದೇಶಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ. ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲೂ, ಕೋಟೆಪಟ್ಟಣಂ ಮೂಲಕ ದೇಶವನ್ನೂ ದಾಟಿ ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ ಸಹಿತ ದೇಶಗಳಲ್ಲೂ ಈ ದೃಶ್ಯ ವಿಸ್ಮಯ ಗೋಚರವಾಗಲಿದೆ.

ಅತ್ಯಂತ ಸ್ಪಷ್ಟವಾಗಿ ಈ ಗ್ರಹಣವನ್ನು ವೀಕ್ಷಿಸಬಹುದಾದ ಜಗತ್ತಿನ ಮೂರು ಪ್ರಮುಖ ಸ್ಥಳಗಳಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಕಾಸರಗೋಡು ಜಿಲ್ಲೆಯ ಚೆರುವತ್ತೂರು, ಕಾಡಂಗೋಡಿನ ಸಾರ್ವಜನಿಕ ಪ್ರದೇಶದಲ್ಲಿ ವೀಕ್ಷಣೆಗಿರುವ ಸರ್ವ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮಾಹಿತಿಯನ್ನು ನೀಡಿದ್ದಾರೆ.

ಭಾರತದಲ್ಲಿ ಪ್ರಥಮ ಬಾರಿಗೆ ಕಾಣಿಸಲಿರುವುದು ಜಿಲ್ಲೆಯ ಚೆರುವತ್ತೂರಿನಲ್ಲಿ ಎಂಬುದು ವಿಶೇಷ. ಈ ಪ್ರದೇಶದ ಭೌಗೋಲಿಕ ವಿಶೇಷತೆಯಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಈ ಹಿನ್ನಲೆ ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಏರ್ಪಡಿಸುವ ಸ್ಪೇಸ್ ಇಂಡಿಯಾ ಸಂಸ್ಥೆ ಸಕಲ ಸಿದ್ಧತೆ ನಡೆಸುತ್ತಿದೆ.

ಸೂರ್ಯಗ್ರಹಣವನ್ನು ನೇರವಾಗಿ ನಮ್ಮ ಕಣ್ಣುಗಳಿಂದ ವೀಕ್ಷಿಸಬಾರದು ಎಂದು ಸ್ಪೇಸ್ ಇಂಡಿಯಾ ಸಂಸ್ಥೆಯ ಸಿ.ಎಂ.ಡಿ.ಸಚಿನ್ ಬಂಬೆ ಮುನ್ನೆಚ್ಚರಿಕೆ ನೀಡಿದ್ದಾರೆ. ಪೂರ್ಣಗ್ರಹಣ ವೇಳೆ ಹಬ್ಬುವ ಕತ್ತಲ ಸಂದರ್ಭ ಸಾರ್ವಜನಿಕರು ತಮ್ಮ ತಮ್ಮ ತಾಣಗಳಿಂದ ಹೊರಗಿಳಿಯಬಾರದು. ಪೂರ್ಣಗ್ರಹಣ ಕೊನೆಗೊಂಡ ವೇಳೆ ಸೂರ್ಯ ಕಿರಣಗಳು ದೊಡ್ಡ ಪ್ರಮಾಣದಲ್ಲಿ ನೇರವಾಗಿ ಕಣ್ಣಿಗೆ ತಾಕುವ ಭೀತಿಯಿದೆ. ಬೆಳಕು ಕಡಿಮೆಯಿರುವ ಸಂದರ್ಭ ಕಂಗಳ ಒಳಭಾಗ ವಿಕಸಿತಗೊಂಡಿರುವ ವೇಳೆ ದೊಡ್ಡ ಪ್ರಮಾಣದಲ್ಲಿ ರವಿಕಿರಣಗಳು ಕಂಗಳಿಗೆ ಬಿದ್ದರೆ ದೃಷ್ಟಿಗೆ ತೊಂದರೆಯುಂಟಾಗುವ ಭೀತಿಯಿದೆ ಎಂದರು.

 

Be the first to comment

Leave a Reply

Your email address will not be published.


*