ಗಂಡ ಜೀವಕ್ಕೆ ಕುತ್ತಿ ತಂದು ಆ ಮೊದಲ ರಾತ್ರಿ..! ವಧು ಯಾಕೆ ಹಾಗೆ ಮಾಡಿದ್ಲು..? – ಎನ್.ಎಂ.ಸಿ ನ್ಯೂಸ್

ಇವರಿಗೆ ಮದುವೆಯಾಗಿ ಇನ್ನೇನು ಫಸ್ಟ್ ನೈಟ್ ಆಗಬೇಕಾಗಿತ್ತು. ಆದರೆ ವಧುವಿನ ಖತರ್ನಾಕ್ ಐಡಿಯಾದಿಂದ ಯುವಕನ ಪ್ರಾಣ ಹಾರಿಬಿಡ್ತಾಯಿತ್ತು. ಆದರೆ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿದ ಕಾರಣ ಯುವಕ ಸೇಫ್ ಆಗಿದ್ದಾನೆ. ಹೌದು ವಧು ಮಾಡಿರುವ ಕೆಲಸ ಯಾವುದು ಅಂತೀರಾ. ಮುಂದೆ ಓದಿ. ಆಂಧ್ರ ಪ್ರದೇಶದ ಕರ್ನೂಲ್ ಎಂಬಲ್ಲಿ ನಾಗಮಣಿ ಮತ್ತು ಲಿಂಗಯ್ಯ ಎನ್ನುವ ಯುವಜೋಡಿ ವಾರಗಳ ಹಿಂದೆ ಹಸೆಮಣೆ ಏರಿದ್ದರು.

ಅದ್ಧೂರಿ ಮದುವೆ ಬಳಿಕ ಮನೆ ದೇವರ ದರ್ಶನ ಪಡೆದು ಬಂದಿದ್ದರು. ಇನ್ನೇನು ಮೊದಲ ರಾತ್ರಿ ನಡೆಯುತ್ತದೆ ಎಂದು ಗಂಡ ಖುಷಿಯಾಗಿದ್ದ. ಹಾಲಿನೊಂದಿಗೆ ಬಂದ ಮಡದಿ ನಾಗಮಣಿ ಅದರಲ್ಲಿ ವಿಷ ಹಾಕಿ ಕುಡಿಸಿದ್ದಳು.ವಿಷಯುಕ್ತ ಹಾಲು ಕುಡಿದ ಲಿಂಗಯ್ಯ ಕುಸಿದು ಬಿದ್ದೊಡನೆ ಆತನ ಮನೆಮಂದಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ಆಂಧ್ರದ ಕರ್ನೂಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತನಿಖೆ ಕೈಗೊಂಡಿದ್ದಾರೆ.

Be the first to comment

Leave a Reply

Your email address will not be published.


*