ಮಾಣಿಗುತ್ತು ಚಾವಡಿಯಲ್ಲಿ ಶ್ರೀಮದ್ ಭಾಗವತಾ ಸಪ್ತಾಹ – ಎನ್.ಎಂ.ಸಿ ನ್ಯೂಸ್

ಮಾಣಿಗುತ್ತು ಉಳ್ಳಾಲ್ತಿ, ಗುಡ್ಡೆ ಚಾಮುಂಡಿ, ಪಂಜುರ್ಲಿ, ಮಲಕೊರತಿ ದೈವಗಳ ಚಾವಡಿಯಲ್ಲಿ ಲೋಕ ಕಲ್ಯಾರ್ಣಥ ಮತ್ತು ಸಮಸ್ತ ದೋಷ ಪರಿಹಾರಕ್ಕಾಗಿ ಶ್ರೀಮದ್ ಭಾಗವತಾ ಸಪ್ತಾಹ ( ಪಾರಾಯಣ ಹಾಗೂ ಪ್ರನಚನ) ಸುಸೂತ್ರವಾಗಿ ನಡೆಯಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಭಾಗವತಾಚಾರ್ಯ ವೇದಮೂರ್ತಿ ಶ್ರೀ ನಾರಾಯಣ ಮೂರ್ತಿ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಬಿ ರಮಾನಾಥ ರೈ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಈ ವೇಳೆ ಊರ ಮಕ್ಕಳು ರಾಧಾ ಕೃಷ್ಣರ ವೇಷ ಧರಿಸಿದ್ದರು

.

 

Be the first to comment

Leave a Reply

Your email address will not be published.


*