ಮೂರು ದೇಹಗಳ ಮೂಳೆಗಾಗಿ ಈತ ಮಾಡಿದ್ದ ಈ ಕೃತ್ಯ..! ಕಾರಣವೇನು… ಊಹಿಸಲು ಸಾಧ್ಯವೇ..? – ಎನ್.ಎಂ.ಸಿ ನ್ಯೂಸ್

ನೀವು ಮಾನವನ ಮೂಳೆಯನ್ನು ಮಾಟ, ಮಂತ್ರ, ಕ್ಷುದ್ರ ದೇವತೆಗಳನ್ನು ಒಲಿಸುವ ಸಲುವಾಗಿ ಹೂತ ಜಾಗದಿಂದ ತೆಗೆಯುವುದನ್ನು ಕೇಳಿದ್ದೀರಿ. ಆದರೆ ಇಲ್ಲೊಂದು ಕಡೆ ವಿಚಿತ್ರ ಸನ್ನಿವೇಶ ನಡೆದಿದೆ. ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ಎಂಬಲ್ಲಿ ಓರ್ವ ವ್ಯಕ್ತಿ ಮೂವರ ಶವದ ಮೂಳೆಯನ್ನು ತೆಗದು ಪೊಲೀಸರ ಅತಿಥಿಯಾಗಿದ್ದಾನೆ. ಈ ವ್ಯಕ್ತಿ ಮೋಟಾರ್ ಸೈಕಲ್‍ನ ಆಸೆಗೆ ಬಲಿಯಾಗಿ ಸ್ವಂತ ಪೋಷಕರ ಹಾಗೂ ಸಂಬಂಧಿಯೊಬ್ಬರ ಶವ ಸಂಸ್ಕಾರದ ಸ್ಥಳವನ್ನು ಅಗೆದು ಮೂಳೆಗಳನ್ನು ತೆಗೆದಿದ್ದಾನೆ.

ಮೂಳೆಯನ್ನು ಹೊರತೆಗೆದಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಮೂರು ದೇಹದ ಮೂಳೆಗಳನ್ನು ಮಾರಿದರೆ ಬರುವ ಸುಮಾರು 300 ಡಾಲರ್ ಹಣದಿಂದ ಮೋಟರ್ ಸೈಕಲ್ ಖರೀದಿ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೇ ಸತ್ತ ವ್ಯಕ್ತಿಗಳ ಮೂಳೆ ಬೇಕು ಎಂದು ತನ್ನ ಬಾಸ್ ಹೇಳಿದ್ದರಿಂದ, ಅಪ್ಪ, ಅಮ್ಮ ಹಾಗೂ ಸಂಬಂಧಿಯ ಶವಗಳನ್ನು ತೆಗೆಯಲು ಮುಂದಾಗಿದ್ದೆ. ಇದರಿಂದ ಸಿಗುವ ಮೂಳೆ ಯಾವುದಕ್ಕೆ ಬಳಸುತ್ತಾರೆ ಎನ್ನುವ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾನೆ.

Be the first to comment

Leave a Reply

Your email address will not be published.


*