ಅನರ್ಹ ಶಾಸಕರನ್ನು ಸೋಲಿಸುವುದೇ ಕಾಂಗ್ರೆಸ್‍ನ ಉದ್ದೇಶ; ಸಿದ್ದರಾಮಯ್ಯ – ಎನ್.ಎಂ.ಸಿ ನ್ಯೂಸ್

ರಾಜ್ಯದಲ್ಲಿ ಕೈ ತೆನೆ ಕೂಟವನ್ನು ಬೀಳಿಸಲು ಕಾರಣರಾದ ಅನರ್ಹ ಶಾಸಕರನ್ನು ಉಪಚುನಾವಣೆಯಲ್ಲಿ ಸೋಲಿಸುವದೇ ಕಾಂಗ್ರೆಸ್ ಪಕ್ಷದ ಧ್ಯೇಯ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು ಅದು ಸತ್ಯಕ್ಕೆ ದೂರವಾಗಿದೆ ಅವರ ಬಹಿರಂಗ ಆರೋಪಗಳ ಬಗ್ಗೆ ಆತಂಕವಿಲ್ಲ,ಏಕೆಂದರೆ ಅವುಗಳಿಗೆ ಯಾವುದೇ ಮೌಲ್ಯ, ಕಿಮ್ಮತ್ತು ಇಲ್ಲ ಎಂದು ಚಾಟಿ ಬೀಸಿದರು.

ಅವರಿಗೆ ಪಾಠ ಕಲಿಸಲು ಪಕ್ಷಕ್ಕೆ ರಾಜೀನಾಮೆ ನೀಡಿದವರ ವಿರುದ್ಧ ಪಕ್ಷ ದೂರು ನೀಡಿದ್ದು ಸಭಾಧ್ಯಕ್ಷರು ಸರಿಯಾದ ಪಾಠ ಕಲಿಸಿದ್ದಾರೆ, ಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿದೆ ಇನ್ನು ಜನರು ಪಾಠ ಕಲಿಸುವುದು ಮಾತ್ರ ಬಾಕಿಯಿದೆ ಎಂದರು.

 

Be the first to comment

Leave a Reply

Your email address will not be published.


*