ವಲಸೆ ಬಂದ ಹಕ್ಕಿಗಳು ನಿಗೂಢ ಸಾವು – ಎನ್.ಎಂ.ಸಿ ನ್ಯೂಸ್

ಮೈಸೂರು ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ ಬೆನ್ನಲ್ಲೆ ಲಿಂಗಾಬುಧಿ ಕೆರೆಯಲ್ಲಿ 15ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಪಕ್ಷಿಗಳು ಮೃತಪಟ್ಟಿದ್ದು ಪಕ್ಷಿಪ್ರಿಯರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆ ಕುಕ್ಕರಹಳ್ಳಿ ಕೆರೆಯಲ್ಲಿ ಮೂರು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. ಈ ಘಟನೆ ಮಾಸುವ ಮುನ್ನವೇ ಮಧ್ಯ ಯೂರೋಪ್‍ನಿಂದ ಸಂತಾನೋತ್ಪತ್ತಿಗಾಗಿ ವಲಸೆ ಬಂದಿದ್ದ ನಾರ್ಥನ್ ಶಾವೆಲ್ಲರ್ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಜಸ್ತಾನದಲ್ಲಿ 4,300ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಪಕ್ಷಿಗಳು ಮೃತಪಟ್ಟ ಬೆನ್ನಲ್ಲೇ 15ಕ್ಕೂ ಹೆಚ್ಚು ಪಕ್ಷಿಗಳ ಕಳೆಬರ ಮೈಸೂರಿನ ಲಿಂಗಾಬುಧಿ ಕೆರೆಯ ದಡದಲ್ಲಿ ಪತ್ತೆಯಾಗಿವೆ. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲದಿದ್ದರೂ, ವೈರಸ್ ನಿಂದ ಪಕ್ಷಿಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೆರೆ ದಡದಲ್ಲಿ ಪಕ್ಷಿಗಳ ಕಳೆಬರ ಬಿದ್ದಿರುವುದು, ಬೈನಾಕ್ಯೂಲರ್ ನಿಂದ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಕಂಡು ಬರುತ್ತದೆ. ಮತ್ತೊಂದೆಡೆ ಲಿಂಗಾಬುಧಿ ಪಾಳ್ಯದ ರಸ್ತೆಗೆ ಹೊಂದಿಕೊಂಡಂತಿರುವ ರಸ್ತೆಯ ಅಂಚಿನಲ್ಲಿರುವ ಕೆರೆ ದಡದಲ್ಲಿ(ಮಂಟಪದ ಬಳಿ) ಪಕ್ಷಿಗಳ ಆರು ಮೃತದೇಹ ತೇಲುತ್ತಿದ್ದವು.

 

Be the first to comment

Leave a Reply

Your email address will not be published.


*