ಲಿಮ್ಕಾ ದಾಖಲೆಗೆ ಭಾರತದ ಮೊದಲ ವಿಶಿಷ್ಟ ಶಸ್ತ್ರಚಿಕಿತ್ಸೆ; ನೀವಿದನ್ನು ಓದಲೇಬೇಕು.. – ಎನ್.ಎಂ.ಸಿ ನ್ಯೂಸ್

2017ರಲ್ಲಿ ಜಿಗಾ ಮತ್ತು ಕಾಲಿಯಾ ಎಂಬ ಅವಳಿ ಮಕ್ಕಳನ್ನು ಬೇರ್ಪಡಿಸಿದ ಯಶಸ್ವಿ ಶಸ್ತ್ರ ಚಿಕಿತ್ಸೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಕ್ಯಾನಿಯೋಪಾಗಸ್ ಶಸ್ತ್ರಚಿಕಿತ್ಸೆಯು ದೇಶದಲ್ಲಿಯೇ ಮೊದಲ ಕಾರ್ಯಾಚರಣೆ ಎಂಬ ದಾಖಲೆಯೊಂದಿಗೆ 2020ರ ಲಿಮ್ಕಾ ರೆಕಾರ್ಡ್ ನಲ್ಲಿ ಸೇರಿದೆ.

ನವದೆಹಲಿಯ ಎಐಐಎಂಎಸ್ ನಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ನರಶಸ್ತ್ರ ಚಿಕಿತ್ಸರಾದ ಪ್ರೊ. ಅಶೋಕ್ ಕುಮಾರ್ ಮಹಾಪಾತ್ರ ಮತ್ತು ಡಾ. ದೀಪಕ್ ಕುಮಾರ್ ಗುಪ್ತಾ ಅವರ ನೇತೃತ್ವದಲ್ಲಿ ವೈದ್ಯರು ಮತ್ತು ಸಿಬ್ಬಂದಿ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿತ್ತು.

ಒಡಿಶಾದ ಕಂಧಮಾಲ್ ಜಿಲ್ಲೆಯ 28 ತಿಂಗಳ ಸಯಾಮಿ ಮಕ್ಕಳನ್ನು ಬೇರ್ಪಡಿಸಲಾಗಿತ್ತು. 2017ರ ಆಗಸ್ಟ್ 28 ಮತ್ತು ಅಕ್ಟೋಬರ್ 25ರಂದು ಎರಡು ಹಂತಗಳಲ್ಲಿ ನಡೆದ ಅತ್ಯಂತ ಕಠಿಣ ಈ ಶಸ್ತ್ರಚಿಕಿತ್ಸೆಯು ದೇಶದಲ್ಲಿಯೇ ಮೊದಲ ಕ್ಯಾನಿಯೋಪಾಗಸ್ ಶಸ್ತ್ರಚಿಕಿತ್ಸೆ ಎಂಬ ದಾಖಲೆಗೆ ಸೇರಿದೆ.

Be the first to comment

Leave a Reply

Your email address will not be published.


*