ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಬಿಬಿಎಂಪಿ ಚಿಂತನೆ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ನ ಹೆಸರನ್ನು ಬದಲಾಯಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಇಂದಿರಾ ಕ್ಯಾಂಟೀನ್ ಬದಲು ನಾಡಪ್ರಭು ಕೆಂಪೇಗೌಡ ಕ್ಯಾಂಟೀನ್ ಎಂದು ಹೆಸರಿಡಲು ಚಿಂತನೆ ನಡೆಸಿದೆ. ಮೇಯರ್ ಎಂ. ಗೌತಮ್‍ಕುಮಾರ್ ಮತ್ತು ಉಪಮೇಯರ್ ಸಿ.ಆರ್. ರಾಮ್‍ಮೋಹನ್ ರಾಜ್ ಅವರು ಈ ಬಗ್ಗೆ ಸಮಾಲೋಚನೆ ನಡೆಸಿದ್ದು, ಉಪಚುನಾವಣೆ ಮುಗಿದ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯಲು ಚಿಂತನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ರಾಮ್‍ಮೋಹನ್ ರಾಜ್, ‘ಹಸಿದ ಬಡವರಿಗೆ ಅನ್ನ ಹಾಕುವ ಜಾಗದಲ್ಲಿ ರಾಜಕೀಯ ಬೇಡ ಎಂಬ ಕಾರಣಕ್ಕೆ ಹೆಸರು ಬದಲಿಸುವ ಸಂಬಂಧ ಮೇಯರ್ ಅವರ ಜತೆ ಅನೌಪಚಾರಿಕ ಚರ್ಚೆ ನಡೆಸಲಾಗಿದೆ’ ಎಂದರು. ‘ಕೆಂಪೇಗೌಡರ ಹೆಸರು ನಾಮಕರಣ ಮಾಡಿದರೆ ಕ್ಯಾಂಟೀನ್‍ಗೆ ಬರುವ ಜನರಿಗೂ ನಮ್ಮದೆಂಬ ಭಾವನೆ ಬರುತ್ತದೆ. ಚುನಾವಣೆ ಮುಗಿದ ಕೂಡಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತೇವೆ’ ಎಂದು ಅವರು ಹೇಳಿದರು.

Be the first to comment

Leave a Reply

Your email address will not be published.


*