ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆ ಪಾಕ್ ಚಳಿ ಬಿಡಿಸಿದ ಭಾರತ..! – ಎನ್.ಎಂ.ಸಿ ನ್ಯೂಸ್

ಪ್ಯಾರಿಸ್: ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಭಯೋತ್ಪಾದಕರನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶ ಎಂದು ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಭಾರತ ಮತ್ತೊಮ್ಮೆ ವಾಗ್ದಾಳಿ ನಡೆಸಿ ಪಾಕ್ ಅನ್ನು ಮುಜುಗರಕ್ಕೆ ಈಡು ಮಾಡುವಂತೆ ಮಾಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ 40ನೇ ಯುನೆಸ್ಕೋ ಸಾಮಾನ್ಯ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಿ ಮಾತನಾಡಿದ ಅಧಿಕಾರಿಗಳು, ಪಾಕಿಸ್ತಾನದ ಭಯೋತ್ಪಾದನೆಯ ಕರ್ಮಕಾಂಡವನ್ನು ಬಯಲುಗೊಳಿಸಿದರು.

ವಿಶ್ವಸಂಸ್ಥೆಯಿ0ದ ಕುಖ್ಯಾತ ಭಯೋತ್ಪಾದಕರೆಂದು ಗುರುತಿಸಲ್ಪಟ್ಟ ೧೩೦ಕ್ಕೂ ಹೆಚ್ಚು ಉಗ್ರರು ಮತ್ತು ೨೫ ಸುಪ್ರಸಿದ್ದ ಉಗ್ರಗಾಮಿ ಸಂಘಟನೆಗಳಿಗೆ ಆಶ್ರಯ ನೀಡಿರುವ ದೇಶ ಯಾವುದು ಎಂದು ಅಧಿಕಾರಿಗಳು ತಮ್ಮ ಭಾಷಣದಲ್ಲಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು.9/11 ಮತ್ತು 26/11 ಈ ಭಯಾನಕ ದಾಳಿಗಳ ಸಂಚುಕೋರರಿಗೆ ಪಾಕಿಸ್ತಾನ ಆಶ್ರಯ ನೀಡಿದ್ದ ಸಂಗತಿ ಇಡೀ ಜಗತ್ತಿಗೆ ಗೊತ್ತಿದೆ ಎಂದು ಭಾರತ ತೀಕ್ಷ್ಣ ವಾಕ್ ಪ್ರಹಾರ ನಡೆಸಿತು. ಭಾರತದ ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಆರ್ಟಿಕಲ್ 370 ರದ್ದತಿ ಮತ್ತು ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿರುವ ಪಾಕಿಸ್ತಾನಕ್ಕೆ ಭಾರತದ ಅಧಿಕಾರಿಗಳು ಬಿಸಿ ಮುಟ್ಟಿಸಿದರು.

ಭಾರತದ ಆಂತರಿಕ ವಿಷಯದಲ್ಲಿ ತಲೆಹಾಕುವ ಹಕ್ಕು ಪಾಕಿಸ್ತಾನಕ್ಕೆ ಇಲ್ಲ. ನಮ್ಮದು ಸರ್ವಧರ್ಮಗಳ ಸಮನ್ವಯ ದೇಶ. ನಾವು ಮಾನವಿಯತೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಬೇರೆ ರಾಷ್ಟ್ರದ (ಪಾಕಿಸ್ತಾನ) ರೀತಿ ಭಯೋತ್ಪಾದಕರಿಗೆ ರಾಜಮರ್ಯಾದೆ ನೀಡುವುದಿಲ್ಲ ಎಂದು ಅಧಿಕಾರಿಗಳು ಆರೋಪಿಸಿದರು.

Be the first to comment

Leave a Reply

Your email address will not be published.


*