ಆಶ್ಚರ್ಯವಾದರೂ ಇದು ಸತ್ಯ..! ಸ್ಕ್ಯಾನಿಂಗ್ ನಲ್ಲಿ ಕಂಡಿದ್ದು ಹೆಣ್ಣು… ಜನಿಸಿದ್ದು ಗಂಡು – ಎನ್.ಎಂ.ಸಿ ನ್ಯೂಸ್

ವೈದ್ಯ ಲೋಕ ಸಾಕಷ್ಟು ಮುಂದಿದೆ. ದಿನಕ್ಕೊಂದರ0ತೆ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿದ್ದು ಇದಕ್ಕೆ ಸವಾಲೊಡ್ಡುವ ಸಂಗತಿಗಳು ಆಗಾಗ್ಗೆ ನಡೆಯುತ್ತಾ ಇರುತ್ತದೆ. ಇಲ್ಲಿ ಸಹ ನಡೆದದ್ದು ಅದೇ ರೀತಿಯಾಗಿ.. ಐರ್ಲೆಂಡ್ ನ ನಿವಾಸಿಗಳಾದ ವಿಲಿಯಂ ಗೋವನ್ ಮತ್ತು ಸರ್ರಾಹೀನಿ ಇಬ್ಬರು ಪುತ್ರಿಯರಿರುವ ದಂಪತಿ. ಮತ್ತೊಂದು ಹೆಣ್ಣು ಮಗುವಿನ ಅಪೇಕ್ಷೆಯಲ್ಲಿದ್ದವರಿಗೆ ಆಗಿದ್ದು ಮಾತ್ರ ಗಂಡು.

ಇವರು ೧೭ ವಾರದಲ್ಲಿ ಖಾಸಗಿಯಾಗಿ ಭ್ರೂಣ ಪರೀಕ್ಷೆ ಮಾಡಿಸಿದ್ದರು. ಅದು ಹೆಣ್ಣು ಎಂದು ಖಾತರಿಯಾಗಿತ್ತು. ಬಳಿಕ ೨೦-೨೫ನೇ ವಾರದಲ್ಲೂ ಸೇರಿ ಒಟ್ಟು ೮ ಬಾರಿ ಸ್ಕ್ಯಾನ್ ಮಾಡಿಸಿದಾಗಲೂ ಹೆಣ್ಣು ಮಗು ಎಂದೇ ವರದಿ ಹೇಳಿತ್ತು. ಇದರ ಆಧಾರದಲ್ಲೇ ಸಂಭ್ರಮದಿ0ದ ದಂಪತಿ ಹೆಣ್ಣು ಮಗುವಿಗೆ ಪಿಂಕ್ ಬಣ್ಣದ ಬಟ್ಟೆ ಖರೀದಿಸಿದ್ದರು. ಆದರೆ ಹೀನಿಗೆ ಡೆಲಿವರಿ ಆದಾಗ ಆಚ್ಚರಿ ಕಾದಿತ್ತು. ವೈದ್ಯಕೀಯ ವರದಿಯನ್ನೇ ಬೆಚ್ಚಿ ಬೀಳಿಸುವಂತೆ ಅವರಿಗೆ ಗಂಡು ಮಗು ಜನಿಸಿತು. ಸಹಜವಾಗಿಯೇ ದಂಪತಿಗಳಿಗೆ ಅಚ್ಚರಿ ಜತೆ ಸಂತಸವೂ ಆಗಿದೆ. ನಮ್ಮ ಬಹುತೇಕ ಬಂಧುಗಳಿಗೆ ಹೆಣ್ಣು ಮಕ್ಕಳೇ ಆಗಿವೆ. ಹಾಗಾಗಿ ಗಂಡು ಮಗು ಆಗಿದ್ದು ಖುಷಿ ಕೊಟ್ಟಿದೆ ಎನ್ನುವ ಹೀನಿ ದಂಪತಿ ಪುಟಾಣಿಗೆ ಮ್ಯಾಕ್ಸ್ ಎಂದು ಹೆಸರಿಟ್ಟಿದ್ದಾರೆ.

ಲಿಂಗ ಬದಲಾದ ಬಗ್ಗೆ ತಲೆಕೆಡಿಸಿಕೊಳ್ಳದ ದಂಪತಿಗಳು ಹೊಸ ಅತಿಥಿ ಜತೆ ಸಂಭ್ರಮಿಸಿದ್ದಾರೆ. ಇನ್ನಿಬ್ಬರು ಮಕ್ಕಳೂ ಪುಟ್ಟ ಕಂದನಿಗೆ ಸಾಥ್ ಕೊಡುತ್ತಿದ್ದಾರೆ. ಒಟ್ಟಾರೆ ವೈದ್ಯ ಲೋಕದ ತಾಂತ್ರಿಕ ಅಚ್ಚರಿ ಮಾತ್ರ ಪ್ರಶ್ನಾರ್ಹವಾಗಿಯೇ ಉಳಿದಿದೆ.

Be the first to comment

Leave a Reply

Your email address will not be published.


*