ದುರ್ಗಾನಗರದ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಶಿಲಾನ್ಯಾಸ ಸಮಾರಂಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ ಭಾಗಿ – ಎನ್.ಎಂ.ಸಿ ನ್ಯೂಸ್

ಬಂಟ್ವಾಳ: ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರ(ರಿ) ದುರ್ಗಾನಗರ ಕುರಿಯಾಳ ಇದರ ನಿಧಿ ಕುಂಭ ಸಹಿತ ಶಿಲಾನ್ಯಾಸ ಸಮಾರಂಭ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾಜಿ ಸಚಿವರಾದ ಬಿ ರಮಾನಾಥ ರೈ ಆಗಮಿಸಿದರು.

ಈ ವೇಳೆ ಮಾತನಾಡಿದ ಅವರು, ಈ ಮಂದಿರ ಪುನರುತ್ಥಾನ ಆಗುವ ಕಾಲ. ನಾವು ಆಧ್ಯಾತ್ಮಿಕ ಕ್ರಮಗಳನ್ನು ಮಾಡಲು ಭಜನಾ ಮಂದಿರಗಳು ಅತ್ಯಗತ್ಯ. ಭಜನಾ ಮಂದಿರದಿ0ದ ಮಾನವನ ಅಂತರಾತ್ಮದ ಪೂಜೆ ಮಾಡಲು ಸಾಧ್ಯ. ಮಂದಿರ ಧಾರ್ಮಿಕ ಕಟ್ಟುಪಾಡುಗಳು ಇಲ್ಲ. ದೈವಾರಾಧನೆ, ದೇವರ ಕೆಲಸ ನಾವು ಭೂಮಿ ಬಂದಿರುವುದು ದೇವನ ಇಚ್ಛೆ. ನಾವು ಈ ಜಾತಿಯಿಂದ ನಾನು ಈ ಧರ್ಮದಲ್ಲಿ ಹುಟ್ಟಬೇಕೆಂದು ನಮಗೆ ಅರ್ಜಿ ಹಾಕಲು ಸಾಧ್ಯವಿಲ್ಲ. ದೇವರು ಕೊಟ್ಟ ಜನ್ಮ ಪಾವನಗೊಳಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.

ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*