ಮೀನು ಸಾಗಾಟ ವಾಹನದ ಟಯರ್ ಸ್ಪೋಟ: ರಸ್ತೆಯುದ್ದಕ್ಕೂ ಚೆಲ್ಲಿದ ಕಾರ್ಗಿಲ್ ಮೀನುಗಳು – ಎನ್.ಎಂ.ಸಿ ನ್ಯೂಸ್

ಕಟಪಾಡಿ : ಮೀನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನವೊಂದು ಟಯರ್ ಸ್ಪೋಟಗೊಂಡು ಪಲ್ಟಿಯಾದ ಪರಿಣಾಮ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಡೆದಿದೆ.

 

ಇಂದು ಮುಂಜಾನೆ ಮಂಗಳೂರಿನಿ0ದ ಉಡುಪಿಯತ್ತ ತೆರಳುತ್ತಿದ್ದ ಟಾಟಾ ಏಸ್ ವಾಹನ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಿರುವು ಹೆದ್ದಾರಿ ೬೬ ರ ಸಮೀಪ ಪಲ್ಟಿಯಾಗಿದೆ. ಪರಿಣಾಮವಾಗಿ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಾಡಿವೆ. ಟಾಟಾ ಏಸ್ ವಾಹನ ಜಖಂಗೊ0ಡಿದ್ದು, ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಕಾರ್ಗಿಲ್ ಮೀನುಗಳನ್ನು ತೆರವುಗೊಳಿಸಲಾಗುತ್ತಿದೆ.

Be the first to comment

Leave a Reply

Your email address will not be published.


*