ಮೆಟ್ರೋದಲ್ಲಿ ಪ್ರಯಾಣ ಮಾಡಿದ ಜೊತೆ ಜೊತೆಯಲಿ ಜೋಡಿ – ಎನ್.ಎಂ.ಸಿ ನ್ಯೂಸ್

ಕನ್ನಡ ಧಾರವಾಹಿಗಳ ಪೈಕಿ ಟಾಪ್ ಸ್ಥಾನ ಗಿಟ್ಟಿಸಿಕೊಂಡ ಧಾರವಾಹಿ ಅಂದರೆ ಅದು ಜೊತೆ ಜೊತೆಯಲಿ. ಝೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಈ ಧಾರವಾಹಿ ವಾರ ವಾರವೂ ವಿಭಿನ್ನತೆಯಿಂದ ಕೂಡಿ ಪ್ರೇಕ್ಷಕರ ಮನಸ್ಸನ್ನು ಕದ್ದು ಸಖತ್ ಟ್ರೆಂಡಿAಗ್ ನಲ್ಲಿರುವ ಸೀರಿಯಲ್.

ಇತ್ತೀಚಿಗೆ ‘ಜೊತೆಜೊತೆಯಲಿ’ ಧಾರವಾಹಿಯ ಶೂಟಿಂಗ್ ಬೆಂಗಳೂರಿನ ‘ಮೆಟ್ರೋ’ದಲ್ಲಿ ನಡೆಯಿತು. ಈ ಧಾರವಾಹಿಯ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಹಾಗೂ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಅವರು ಮೆಟ್ರೋದಲ್ಲಿ ಜೊತೆಜೊತೆಯಾಗಿ ಪ್ರಯಾಣ ಮಾಡುತ್ತಾರೆ. ಇವರನ್ನು ನೋಡಿದ್ದೆ ತಡ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಅಭಿಮಾನಿಗಳು ಅವರನ್ನು ಮುತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಲ್ಲದೇ, ಧಾರವಾಹಿ ಹೀಗೆ ಮುನ್ನಡೆಯಲಿ ಎಂದು ಶುಭ ಹಾರೈಸಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Be the first to comment

Leave a Reply

Your email address will not be published.


*