ಉತ್ತರಾಖಂಡದ ಹಲವೆಡೆ ಲಘು ಭೂಕಂಪನ; 4.5 ತೀವ್ರತೆಯ ಪ್ರಮಾಣ – ಎನ್.ಎಂ.ಸಿ ನ್ಯೂಸ್

ಡೆಹ್ರಾಡೂನ್: ಉತ್ತರ ಭಾರತದಾದ್ಯಂತ ಹಲವೆಡೆ ಹಿಮ ಮಳೆಯಾಗುತ್ತಿದ್ದು, ಹಲವೆಡೆ ಹಿಮಪಾತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದೀಗ ಭೂಕಂಪನ ಉಂಟಾಗಿದೆ. ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ.

ಪಿಥೋರಗಢ ಮತ್ತು ರಾಜ್ಯದ ಬಾಗೇಶ್ವರದಲ್ಲಿನ ಜನರಿಗೆ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.5 ರಷ್ಟು ದಾಖಲಾಗಿದೆ.ಪಿಥೋರಗಢದ ನಚ್ನಿ, ಮುನ್ಸಿಯಾರಿ ಮತ್ತು ಥಾಲ್ ಮುಂತಾದ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದ್ದು, ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ತಂಡ ತಿಳಿಸಿದೆ.

Be the first to comment

Leave a Reply

Your email address will not be published.


*