ಅಯ್ಯಪ್ಪಸ್ವಾಮಿ ದೇಗುಲದ ಕಾಡಿನಲ್ಲಿ ಉಗ್ರರ ಪ್ರವೇಶ; ಮಲೆಯಲ್ಲಿ ಗುಪ್ತಚರ ಹೈ ಅಲರ್ಟ್ – ಎನ್.ಎಂ.ಸಿ ನ್ಯೂಸ್

ತಿರುವನಂತಪುರ0: ವಿಶ್ವವಿಖ್ಯಾತ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಅರಣ್ಯದ ಮೂಲಕ ಸಾಗಬೇಕಾಗಿರುವುದರಿಂದ, ಆ ಮೂಲಕವೇ ಉಗ್ರರು ನುಸುಳುವ ಸಾಧ್ಯತೆಯಿದೆ ಎಂದು ಕೇರಳ ಮತ್ತು ಕೇಂದ್ರ ಸರಕಾರಕ್ಕೆ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ನವೆಂಬರ್ ಹದಿನಾರರಿಂದ ಜನವರಿ ಇಪ್ಪತ್ತರವರೆಗೆ ಶಬರಿಮಲೆ ದೇವಾಲಯ ಮಂಡಲಪೂಜೆ ಮತ್ತು ಮಕರ ಸಂಕ್ರಾತಿಗಾಗಿ, 66 ದಿನ ಬಾಗಿಲು ತೆರೆದಿರುತ್ತದೆ. ಈ ಅವಧಿಯಲ್ಲಿ ಅತೀವ ಭದ್ರತೆಯನ್ನು ನೀಡುವಂತೆ, ಗುಪ್ತಚರ ಇಲಾಖೆ ಸೂಚಿಸಿದೆ.

ಅರಣ್ಯ ಪ್ರದೇಶದಲ್ಲಿ ಭಕ್ತರು ಬರುವಾಗ ಅವರ ರೂಪದಲ್ಲೇ ಉಗ್ರರು ನುಸುಳುವ ಸಾಧ್ಯತೆಯಿದೆ. ದೇವಾಲಯಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಬಳಿಯೂ ಮಾಹಿತಿಯನ್ನು ಸಂಗ್ರಹಿಸಿ, ದೇವಾಲಯದೊಳಗೆ ಬಿಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾರಿ, ಶಬರಿಮಲೆ ದೇವಾಲಯದ ಮೇಲೆ, ವಾಯುಸೇನೆ ಮತ್ತು ನೌಕಾಪಡೆಯ ರಕ್ಷಣೆಯೂ ಇರಲಿದೆ. ಜೊತೆಗೆ, ದೇವಾಲಯಕ್ಕೆ ಸಾಮಗ್ರಿಗಳನ್ನು ತೆಗೆದುಕೊಂಡು ಬರುವ ವಾಹನವೂ ವಿಶೇಷ ತಪಾಸಣೆಗೆ ಒಳಪಡಲಿದೆ.

ನವೆಂಬರ್ ೧೬ ರಿಂದ ಡಿಸೆಂಬರ್ 27ರವರೆಗೆ ದೇವಾಲಯ ಮಂಡಲಪೂಜೆಗೆ ತೆರೆಯಲಿದೆ. ಡಿಸೆಂಬರ್ 28, 29ರಂದು ದೇವಾಲಯವನ್ನು ಮುಚ್ಚಲಾಗುವುದು. ನಂತರ, ಡಿಸೆಂಬರ್ 30 ರಿಂದ ಜನವರಿ 21ರವರೆಗೆ, ಮಕರ ವಿಳಕ್ಕುಗಾಗಿ ದೇವಾಲಯ ಮತ್ತೆ ತೆರೆಯಲಿದೆ. ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಹೇರಿದ್ದ ನಿಷೇಧ ತೆರವುಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಈ ವಾರದಲ್ಲಿ (ನ 12-16) ನೀಡುವ ಸಾಧ್ಯತೆಯಿದೆ.

Be the first to comment

Leave a Reply

Your email address will not be published.


*