
ಸುಪ್ರೀಂ ಕೋರ್ಟ್ ನೀಡಲಿರುವ ಆಯೋಧ್ಯಾ ಭೂವಿವಾದದ ಕೇಸಿನ ತೀರ್ಪಿನ ನಂತರ ದೇಶದ ಪ್ರಜೆಗಳು ಶಾಂತಿಯನ್ನು ಕಾಪಾಡಬೇಕು. ಸರ್ವೋಚ್ಛ ನ್ಯಾಯಲಯದ ಘನತೆಗೆ ಗೌರವ ಕೊಡಬೇಕೆಂದು ಮಾಜಿ ಕೇಂದ್ರ ಸಚಿವರಾದ ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ಆಪರೇಷನ್ ಕಮಲದ ಕುರಿತ ಆಡಿಯೋ ಸುಪ್ರೀಂ ಕೋರ್ಟ್ ಮುಂದಿದೆ. ೧೭ ಶಾಸಕರು ಕೊಂಡುಕೊಳ್ಳುವಲ್ಲಿ ಬಿಜೆಪಿ ಕುಟಿಲ ಯೋಜನೆ ಮಾಡಿದೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದರು.
ಇನ್ನು ಸಂಚು ನಡೆಸಿದ ಯಡ್ಡಿ ಹಾಗೂ ಅಮಿತ್ ಷಾ ಇಬ್ಬರೂ ಪ್ರಜಾಪ್ರಭುತ್ವದ ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡಲಿ ಎಂದು ಕಿಡಿಕಾರಿದ್ದಾರೆ. ಅಂತೆಯೇ ಮಹಾರಾಷ್ಟçದಲ್ಲಿ ಶಿವಸೇನೆ ,ಆಡುತ್ತಿರುವ ರೆಸಾರ್ಟ್ ರಾಜಕೀಯ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟರು.
Be the first to comment